Connect with us

    LATEST NEWS

    ಮಂಗಳೂರು – ಕಾರಿನ ಶೋರೂಂಗೆ ನುಗ್ಗಿದ ಕಾಡು ಹಂದಿ

    ಮಂಗಳೂರು ನವೆಂಬರ್ 27: ಮಂಗಳೂರಿನ ಕಾರಿನ ಶೋರೂಂ ಆವರಣಕ್ಕೆ ಕಾಡು ಹಂದಿಯೊಂದು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಡೆದಿದ್ದು, ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.


    ನವೆಂಬರ್ 24 ರಂದು ಈ ಘಟನೆ ನಡೆದಿದ್ದು, ನಗರದ ಪಡೀಲ್ ರೈಲ್ವೆ ಬ್ರಿಡ್ಜ್ ಸಮೀಪ ಇರುವ ಕಾರ್ ಶೋರೂಂ ನ ಆವರಣಕ್ಕೆ ಹೆದ್ದಾರಿ ದಾಟಿ ಮುಖ್ಯದ್ವಾರದಲ್ಲೇ ಓಡಿಬಂದ ಕಾಡುಹಂದಿ ನುಗ್ಗಿದ್ದು, ಅಲ್ಲೆ ಆವರಣದಲ್ಲಿ ಓರ್ವನ ಹಿಂದೆಯೇ ಓಡಿ ತಿವಿಯಲು ಯತ್ನಿಸಿದೆ ಅದೃಷ್ಟವಶಾತ್ ಅವರು ಅವರು ಪಾರಾಗಿದ್ದಾರೆ. ಕೆಲ ಸಮಯದ ಬಳಿಕ ಕಾಡು ಹಂದಿ ರಸ್ತೆ ದಾಟಿ ಪಕ್ಕದ ಕಾಡಿನ ಕಡೆಗೆ ಓಡಿದೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply