ತೆರೆದ ಬಾವಿಗೆ ಬಿದ್ದ ಕಾಡು ಹಂದಿ 6 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

ಬಂಟ್ವಾಳ ಫೆಬ್ರವರಿ 24:ತಾಲೂಕಿನ ಮೂಡುಪಡುಕೋಡಿ ಗ್ರಾಮದ ಬಾಂಬಿಲ ಎಂಬಲ್ಲಿ ಉಸ್ಮಾನ್ ಎಂಬವರ ೩೫ ಅಡಿ ತೆರೆದ ಬಾವಿಗೆ ಬಿದ್ದ ಕಾಡು ಹಂದಿಯನ್ನು ಸತತ ಆರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಮೇಲಕ್ಕೆತ್ತಲಾಗಿದೆ.

ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಜಂಟಿ ಕಾರ್ಯಾಚರಣೆಯಲ್ಲಿ ಕಾಡು ಹಂದಿಯನ್ನು ರಕ್ಷಿಸಲಾಗಿದೆ. ಕಾರ್ಯಾಚರಣೆಯನ್ನು ವಲಯ ಅರಣ್ಯಾಧಿಕಾರಿ ಅನಿತಾ ಕೆ.ಅರಣ್ಯ ರಕ್ಷಕ ಸ್ಮಿತಾ ಎನ್. ಮನೋಜ್, ರವಿಕುಮಾರ್ ಹಾಗೂ ವಾಹನ ಚಾಲಕ ಜಯರಾಮ ಹಾಗೂ ಪರಿಸರ ಸ್ನೇಹಿ ಕಿರಣ್ ಪಿಂಟ, ಸಾರ್ವಜನಿಕರಾದ ಸುಲೈಮಾನ್, ಸುರೇಶ್, ಅಶೋಕ ಹಾಗೂ ಅರಣ್ಯ ಬೆಂಕಿ ವೀಕ್ಷಕ ಉದಯ ಭಾಗವಹಿಸಿದರು.