ಪ್ರೇಮ ಸಂಬಂಧಗಳು ಸಾಮಾನ್ಯವಾಗಿ ದಂಪತಿಗಳು ಬೇರೆಯಾಗುವುದು ಅಥವಾ ಕಾನೂನು ಕ್ರಮಕ್ಕೆ ಕಾರಣವಾಗುತ್ತದೆ. ಆದರೆ ಥೈಲ್ಯಾಂಡ್ನಲ್ಲಿ ಒಂದು ಅಸಾಮಾನ್ಯ ಪ್ರಕರಣದವಾಗಿದೆ. ಒಬ್ಬ ಹೆಂಡತಿ ತನ್ನ ಗಂಡನನ್ನ ₹85,000 ಆತನ ಪ್ರೇಯಸಿಗೆ ಬಾಡಿಗೆಗೆ ನೀಡಲು ಮುಂದಾಗಿದ್ದಾಳೆ.
ಥಾಯ್ ಮಹಿಳೆ ಖುನ್ ಕ್ವಾಂಗ್ ತನ್ನ ಓದು ಮುಗಿಸಿದ ಸ್ವಲ್ಪ ಸಮಯದ ನಂತರ ಮದುವೆಯಾಗಿದ್ದಳು. ಆ ಸಮಯದಲ್ಲಿ ಅವಳಿಗೆ 21 ವರ್ಷ, ನಂತರ ದಂಪತಿಗೆ 8 ವರ್ಷದ ಮಗ ಕೂಡ ಇದ್ದ. ಹಲವು ವರ್ಷಗಳ ಕಾಲ ಅವರ ಸಂಬಂಧ ಸ್ಥಿರವಾಗಿದೆ ಎಂದು ಆಕೆ ನಂಬಿದ್ದಳು. ತಮ್ಮ ಮದುವೆಯನ್ನು ಪರಸ್ಪರ ಪ್ರಿತಿ, ವಿಶ್ವಾಸ ಹಾಗೂ ಗೌರವದ ಮೇಲೆ ನಿಂತಿತ್ತು.
ಆದರೆ ಕೆಲ ದಿನಗಳಿಂದ ಗಂಡನ ಚಲನೆ ವಲನ ಕಂಡು ಮಹಿಳೆಗೆ ತನ್ನ ಗಂಡ ಬೇರೆ ಮಹಿಳೆ ಜೊತೆ ಸಂಬಂಧವಿರುವ ಅನುಮಾನ ಶುರುವಾಗಿತ್ತು. ಕಳದೆ 2025 ರ ಮಧ್ಯದಲ್ಲಿ ಆನ್ಲೈನ್ನಲ್ಲಿ ಅಪರಿಚಿತ ಮಹಿಳೆಯೊಬ್ಬರು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಖುನ್ ಕ್ವಾಂಗ್ ತನ್ನ ಗಂಡನ ಜೊತೆಯಿರುವ ಫೋಟೊಗಳನ್ನ ವೀಕ್ಷಿಸುತ್ತಿರುವುದನ್ನು ಮತ್ತು ತನ್ನ ಗಂಡನ ಜೀವನವನ್ನು ಅನುಸರಿಸುತ್ತಿರುವುದನ್ನು ಅವಳು ಗಮನಿಸಿದ್ದಾಳೆ.
ಆರಂಭದಲ್ಲಿ ತನ್ನ ಗಂಡನನ್ನು ಅದರ ಬಗ್ಗೆ ಎದುರಿಸದಿರಲು ನಿರ್ಧರಿಸಿದಳು. ದಿನಗಳ ನಂತರ, ಕ್ವಾಂಗ್ ತನ್ನ ಗಂಡನ ದಿನಚರಿಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಗಮನಿಸಲು ಪ್ರಾರಂಭಿಸಿದಳು. ಸ್ವಲ್ಪ ದಿನಗಳ ಕಾಲ ನಿರ್ಲಕ್ಷಿಸಿದಳು. ಆದರೆ ಒಂದು ಘಟನೆ ಗಂಭೀರ ಕಳವಳವನ್ನು ಹುಟ್ಟುಹಾಕಿತು.
ಒಂದು ರಾತ್ರಿ ಅವನು ಸುಮಾರು 1 ಗಂಟೆಯವರೆಗೆ ಮನೆಗೆ ಹಿಂತಿರುಗಲಿಲ್ಲ, ಇದು ಅವರ ಸಂಬಂಧದಲ್ಲಿ ಹಿಂದೆಂದೂ ಸಂಭವಿಸದ ವಿಷಯವಾಗಿತ್ತು. ಆ ರಾತ್ರಿ ಮಹಿಳೆ ಗಂಡನಿಗೆ ಹಲವಾರು ಬಾರಿ ಕರೆ ಮಾಡಲು ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಆಗಿತ್ತು. ಕೊನೆಗೆ ಗಂಡನು ಮನೆಗೆ ಬಂದಾಗ ಅವನ ಪ್ರತಿಕ್ರಿಯೆ ಅವಳನ್ನು ಆಘಾತಗೊಳಿಸಿತು. ಮನೆ ಮತ್ತು ಕಾರು ಸೇರಿದಂತೆ ತನ್ನಲ್ಲಿರುವ ಎಲ್ಲವನ್ನೂ ಬೇರೆ ಮಹಿಳೆ ಜೊತೆಯಿರುವ ಕುಟುಂಬಕ್ಕೆ ಈಗಾಗಲೇ ನೀಡಿದ್ದೇನೆ ಮತ್ತು ಮನೆಯ ಸಾಲಗಳ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದೇನೆ ಎಂದು ಗಂಡ ಹೇಳಿದನು. ತಾನು ಧರಿಸಿದ್ದ ಬಟ್ಟೆಗಳನ್ನು ಹೊರತುಪಡಿಸಿ ಬೇರೇನೂ ಇಲ್ಲದೆ ಹೊರಡುವ ಉದ್ದೇಶ ಹೊಂದಿದ್ದೇನೆ ಎಂದು ಗಂಡ ಹೇಳಿದ್ದ.
ತಕ್ಷಣ ಪ್ರತಿಕ್ರಿಯಿಸುವ ಬದಲು, ಕ್ವಾಂಗ್ ಏನಾಗುತ್ತಿದೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಿರ್ಧರಿಸಿದಳು. ತನ್ನ ಗಂಡನ ನಡವಳಿಕೆಯನ್ನು ಪರಿಶೀಲಿಸಲು ತಾನು ಖಾಸಗಿ ತನಿಖಾಧಿಕಾರಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಿದ್ದಳು. ತನಿಖೆ ವೇಳೆ ತನ್ನ ಗಂಡ ಕಳೆದ ರಾತ್ರಿ ತನ್ನ ಪ್ರೆಯಿಸಿ ನಿವಾಸಕ್ಕೆ ಹೋಗಿದ್ದಾನೆ ಎಂದು ಸುಳಿವು ಸಿಕ್ಕಿದ ಬಳಿಕ ವಾದಗಳನ್ನು ಮುಂದುವರಿಸುವ ಬದಲು, ಕ್ವಾಂಗ್ ಹಣಕಾಸಿನ ವ್ಯವಸ್ಥೆಯನ್ನು ಸೂಚಿಸಿದಳು. ಅವರು ತಮ್ಮ ಪತಿ ಮತ್ತು ಅವರ ಪ್ರೇಯಸಿ ಇಬ್ಬರಿಗೂ, ಅವರು ನಿಜವಾಗಿಯೂ ಒಟ್ಟಿಗೆ ವಾಸಿಸಲು ಬಯಸಿದರೆ ಅವರು ತಿಂಗಳಿಗೆ ಸುಮಾರು ರೂ. 85,000 ನೀಡ ಬೇಕೆಂದು ಅವರಲ್ಲಿ ಕೇಳಿಕೊಂಡಿದ್ದಾಳೆ.