DAKSHINA KANNADA
‘ಮುಸ್ಲಿಂ ಮಹಿಳೆಯರ ಬಗ್ಗೆ ಪ್ರಭಾಕರ್ ಭಟ್ ಗೆ ಯಾಕಿಷ್ಟು ದ್ವೇಷ’..? ಯುಟಿ ಫರ್ಝಾನ
ಮಂಗಳೂರು : ಮುಸ್ಲೀಂ ಮಹಿಳೆಯರ ಬಗ್ಗೆ ಹೀನಾಯವಾಗಿ ಮಾತನಾಡಿದ ಆರ್ ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ನಡವಳಿಕೆ ಖಂಡನೀಯ.ಪದೇ ಪದೇ ದ್ವೇಷ ಕಾರುವ ಈ ವ್ಯಕ್ತಿ ಹಿಂದೂ ಸಮುದಾಯದ ಮುಖಂಡ ಆಗಲು ಸಾಧ್ಯನೇ ಇಲ್ಲ ಎಂದು ಕಾಂಗ್ರೆಸ್ ವಕ್ತಾರೆ ಯುಟಿ ಫರ್ಝಾನ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಪ್ರಭಾಕರ್ ಭಟ್ ಅವರಿಗೆ ಯಾಕೆ ಇಷ್ಟು ದ್ವೇಷ ಎಂದು ನಂಗೆ ಅರ್ಥವಾಗ್ತಿಲ್ಲ, ಕಲ್ಲಡ್ಕ ಪ್ರಭಾಕರ್ ಭಟ್ ಗೆ ಮ್ಯಾನರ್ಸ್ ಅನ್ನೋದೆ ಇಲ್ವಾ ಎಂದು ಪ್ರಶ್ನಿಸಿದ ಅವರು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ಪ್ರತೀ ಮಹಿಳೆಯರಿಗೆ ಮಾಡುವ ಅವಮಾನವಾಗಿದೆ.ಭಟ್ ಅವರ ಮನಸ್ಥಿತಿ ನೋಡಿದ್ರೆ ಅವರ ಶಾಲೆಯ ಹೆಣ್ಣುಮಕ್ಕಳ ಅವಸ್ಥೆ ಯಾವ ರೀತಿ ಇರಬಹುದು. ಅವರ ಶಾಲೆಗೆ ಹೆಣ್ಣುಮಕ್ಕಳನ್ನು ಕಳುಹಿಸೋಕೆ ಹೆತ್ತವರಿಗೆ ಭಯ ಆಗಲ್ವಾ ಎಂದು ಪ್ರಶ್ನಿ ಮಾಡಿದ ಫರ್ಝಾನ ಕಲ್ಲಡ್ಕ ಪ್ರಭಾಕರ್ ಭಟ್ ನಡೆಸುವ ಶಾಲೆಯ ಬಗ್ಗೆ ಸರ್ವೇ ಆಗಬೇಕಿದೆ.ಮುಸ್ಲಿಂ ಮಹಿಳೆಯರಿಗೆ ಗಂಡನನ್ನು ಕೊಡಲು ಇವರು ಯಾರು? ಇವರ ಹೆಂಡತಿಯರು ಸರಿ ಇದ್ದಾರಾ ಅನ್ನೋದನ್ನು ಪ್ರಶ್ನೆ ಮಾಡಬೇಕಿದೆ ಎಂದ ಅವರು ಪದೇ ಪದೇ ದ್ವೇಷ ಕಾರುವ ವ್ಯಕ್ತಿ ಹಿಂದೂ ಸಮುದಾಯದ ಮುಖಂಡ ಆಗಲು ಸಾಧ್ಯ ಇಲ್ಲ ಆದ್ದರಿಂದ ಭಟ್ ಗೆ ಆರ್ ಎಸ್ ಎಸ್ ನವರೇ ಬಹಿಷ್ಕಾರ ಹಾಕಬೇಕು ಯುಟಿ ಫರ್ಝಾನ ಹೇಳಿದ್ದಾರೆ.
You must be logged in to post a comment Login