Connect with us

DAKSHINA KANNADA

ದೀಪಕ್ ರಾವ್ ಸ್ಮರಣಾರ್ಥ ಅಶಕ್ತರಿಗೆ ಗಾಲಿ ಕುರ್ಚಿ ವಿತರಣೆ

ಮಂಗಳೂರು, ಜನವರಿ 03: ಭಾಜಪಾದ ನಿಷ್ಟಾವಂತ ಕಾರ್ಯಕರ್ತರಾಗಿದ್ದ, ಮೂರು ವರ್ಷಗಳ ಹಿಂದೆ ಮತಾಂಧರ ರಕ್ತದಾಹಕ್ಕೆ ಬಲಿಯಾಗಿದ್ದ ದೀಪಕ್ ರಾವ್ ಬಲಿದಾನದ ನೆನಪನ್ನು ಚಿರಸ್ಥಾಯಿಯನ್ನಾಗಿಸುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪರಿವಾರ ಸಂಘಟನೆ ‘ಸಕ್ಷಮ’ ಕಾಟಿಪಳ್ಳ-ಗಣೇಶಪುರ ಇದರ ನೇತೃತ್ವದಲ್ಲಿ ಭಾನುವಾರ ದೀಪಕ್ ರಾವ್ ಅಗಲಿದ ದಿನ ಮಾದರಿ ಕಾರ್ಯ ನಡೆಯಿತು.

ಸುರತ್ಕಲ್ ಆಶ್ರಯ ಕಾಲೋನಿಯ ಜನಾರ್ಧನ ನಾಯ್ಕ್ ಸಹಿತ ನಾಲ್ಕು ಅಶಕ್ತ ಕುಟುಂಬಗಳ ದಿವ್ಯಾಂಗರ ಮನೆಗೆ ತೆರಳಿದ ಶಾಸಕ ಡಾ.ವೈ ಭರತ್ ಶೆಟ್ಟಿಯವರು ದೀಪಕ್ ರಾವ್ ಅವರ ತಾಯಿ ಪ್ರೇಮಾ ಅವರ ಮೂಲಕ ಗಾಲಿ ಕುರ್ಚಿಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಯುವ ಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಸಹಿತ ಈ ಸಮಾಜಮುಖಿ ಕಾರ್ಯದಲ್ಲಿ ಕೈಜೋಡಿಸಿದ ದಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.