Connect with us

MANGALORE

ಉಳ್ಳಾಲದಲ್ಲಿ ಕಾಂಗ್ರೇಸ್ ಮುಖಂಡನಿಂದ ಗುಂಡಿನ ದಾಳಿ

ಉಳ್ಳಾಲದಲ್ಲಿ ಕಾಂಗ್ರೇಸ್ ಮುಖಂಡನಿಂದ ಗುಂಡಿನ ದಾಳಿ

ಮಂಗಳೂರು ಸೆಪ್ಟೆಂಬರ್ 23: ವಾಟ್ಸಾಪ್ ಸ್ಟೇಟಸ್ ವಿಚಾರದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದ್ದು, ಮಾರಾಮಾರಿ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಶೂಟೌಟ್ ನಡೆಸಿದ ಘಟನೆ ಮಂಗಳೂರು ನಗರ ಹೊರವಲಯದ ಉಳ್ಳಾಲದ ಮಕ್ಕಚ್ಚೇರಿ ಕಿಲೇರಿಯಾ ನಗರದಲ್ಲಿ ನಡೆದಿದೆ.

ಇರ್ಷಾದ್(17) ಗುಂಡೇಟಿನಿಂದ ಗಾಯಗೊಂಡ ಸ್ಥಳೀಯ ನಿವಾಸಿ. ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಉಂಟಾದ ಮನಸ್ತಾಪದ ಕಾರಣದಿಂದಾಗಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ತನ್ನ ಸಹಚರರೊಂದಿಗೆ ಆಗಮಿಸಿದ್ದಾನೆ.

ಈ ಸಂದರ್ಭದಲ್ಲಿ ಮತ್ತೊಂದು ತಂಡ ಸುಹೈಲ್ ಕಂದಕ್ ಮೇಲೆ ಬ್ಯಾಟು, ದೊಣ್ಣೆ ಇತ್ಯಾದಿಗಳಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದ್ದು, ಗಲಾಟೆ ಸಂದರ್ಭದಲ್ಲಿ ಸುಹೈಲ್ ಅವರು ತನ್ನಲ್ಲಿರುವ ರಿವಾಲ್ವರ್‌ನಿಂದ 5 ಸುತ್ತು ಗುಂಡು ಹಾರಿಸಿದ್ದಾರೆ. ಸುಹೈಲ್ ಕಂದಕ್ ಅವರ ಹಾರಿಸಿದ ಗುಂಡಿಗೆ ಇರ್ಷಾದ್ ಎಂಬ ಯುವಕ ಗಾಯಗೊಂಡಿದ್ದಾನೆ.

ಸುಹೈಲ್ ಫೈರಿಂಗ್ ಮಾಡುತ್ತಿದ್ದಂತೆ ಸ್ಥಳೀಯರು ಆತನ ಕಾರನ್ನು ಪುಡಿಗಟ್ಟಿ , ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಅವರು ಗಾಯಗೊಂಡಿದ್ದು, ಸುಹೈಲ್ ಕಂದಕ್ ರ ತಲೆಗೆ ಪೆಟ್ಟಾಗಿದ್ದು ತೊಕ್ಕೊಟ್ಟಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ನಗರದ ಖಾಸಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Facebook Comments

comments