ನ್ಯೂಜಿಲೆಂಡ್ ನ ಕಡಲ ತೀರದಲ್ಲಿ ಅಪರೂಪದ 145 ತಿಮಿಂಗಲಗಳ ಸಾವು

ನ್ಯೂಜಿಲೆಂಡ್ ನವೆಂಬರ್ 26: ಅಪರೂಪಕ್ಕೆ ಜನರ ಕಣ್ಣಿಗೆ ಕಾಣಸಿಗುತ್ತಿದ್ದ ವಿಶಿಷ್ಟ ಬಗೆಯ ತಿಮಿಂಗಿಲ(pygmy killer whales, pilot whales)ಗಳು ನ್ಯೂಜಿಲೆಂಡ್ ನ ಸ್ಟೀವರ್ಟ್ ದ್ವೀಪದಲ್ಲಿ ಕಡಲ ತೀರದಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿದೆ.

ಸ್ಟೀವರ್ಟ್‌ ಐಲ್ಯಾಂಡ್‌ನ ತೀರದಲ್ಲಿ 2 ಕಿ.ಮೀ. ಅಂತರದಲ್ಲಿ ತಿಮಿಂಗಿಲಗಳು ಬಿದ್ದಿರುವುದನ್ನು ಆ ಭಾಗದಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬರು ಗಮನಿಸಿದ್ದಾರೆ. ಒಟ್ಟು 145 ತಿಮಿಂಗಿಲಗಳು ಕಡಲ ತೀರದಲ್ಲಿ ಬಂದು ಬಿದ್ದಿವೆ, ಇವುಗಳಲ್ಲಿ ಸುಮಾರು ಎಂಟು ತಿಮಿಂಗಿಲಗಳನ್ನು ಸಂರಕ್ಷಣಾ ಇಲಾಖೆಯ ತಜ್ಞರು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಅತಿ ದೂರದ ದ್ವೀಪ ಪ್ರದೇಶವಾಗಿರುವ ಕಾರಣ, ತಿಮಿಂಗಿಲಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಈಗಾಗಲೇ 75 ತಿಮಿಂಗಿಲಗಳು ಮೃತಪಟ್ಟಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವ ತಿಮಿಂಗಿಲಗಳಿಗೆ ನರಳಾಟ ತಪ್ಪಿಸಲು ದಯಾಮರಣ ನೀಡಲು ಸಂರಕ್ಷಣಾ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

VIDEO

4 Shares

Facebook Comments

comments