Connect with us

    LATEST NEWS

    ಪಶ್ಚಿಮ ಬಂಗಾಳದ ಸಿಎಂ ಹೆಲ್ತ್ ಮಿನಿಸ್ಟರ್ ಹೋಂ ಮಿನಿಸ್ಟರ್ ಮಮತಾ ಬ್ಯಾನರ್ಜಿ ಯಿಂದ ಅತ್ಯಾಚಾರಿಗಳಿಗೆ ಶಿಕ್ಷೆಯಾಗಲು ಪ್ರತಿಭಟನೆ

    ಕೊಲ್ಕತ್ತಾ ಅಗಸ್ಟ್ 16: ಆರ್​.ಜಿ. ಕರ್ ಕಾಲೇಜಿನಲ್ಲಿ ವೈದ್ಯೆಯ ಮೇಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮಾ ನಡೆಯುತ್ತಿದೆ. ಸ್ವತಃ ಸಿಎಂ ಮಮತಾ ಬ್ಯಾನರ್ಜಿ ಅವರು ಇಂದು ರಸ್ತೆಗಿಳಿದು ಅತ್ಯಾಚಾರ ಪ್ರಕರಣದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.


    ಈಗಾಗಲೇ ಆರ್ ಜಿಕರ್ ಕಾಲೇಜಿನಲ್ಲಾದ ಅನ್ಯಾಯದ ವಿರುದ್ಧ ಇಡೀ ವೈದ್ಯಲೋಕವೇ ರೊಚ್ಚಿಗೆದ್ದಿದೆ. ದೇಶಾದ್ಯಂತ ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿದೆ. ಇದರ ಮಧ್ಯೆ ಆರ್​ಜಿ ಕರ್ ಕಾಲೇಜಿನಲ್ಲಿ ನಿನ್ನೆ ನಡೆದ ವಿಧ್ವಂಸಕ ಕೃತ್ಯಗಳು ಜನರನ್ನ ಇನ್ನಷ್ಟು ಕೆರಳಿಸಿದೆ. ಆಸ್ಪತ್ರೆಗೆ ನುಗ್ಗಿದ ಒಂದು ಗುಂಪು ಅಲ್ಲಿನ ಪೀಠೋಪಕರಣಗಳನ್ನು ಧ್ವಂಸಗೊಳಿಸಿವುದರ ಜೊತೆಗೆ ದೊಡ್ಡ ದಾಂಧಲೆಯನ್ನೇ ಸೃಷ್ಟಿಸಿದ್ದರು. ಇದೆಲ್ಲದರ ಬೆಳವಣಿಗೆಗಳ ನಡುವೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಯವರ ರಾಜೀನಾಮೆಗಾಗಿ ವಿಪಕ್ಷಗಳು ಪಟ್ಟು ಹಿಡಿದಿದ್ದವು. ಈಗ ಸಿಎಂ ಮಮತಾ ಬ್ಯಾನರ್ಜಿಯೇ ಪ್ರತಿಭಟನೆಯ ಅಖಾಡಕ್ಕೆ ಇಳಿದಿದ್ದಾರೆ.
    ಪಶ್ಚಿಮಬಂಗಾಳದ ಸಿಎಂ ಆಗಿರುವ ಮಮತಾ ಬ್ಯಾನರ್ಜಿ ಅವರ ಕೈಯಲ್ಲಿ ಆರೋಗ್ಯ ಇಲಾಖೆ, ಹಾಗೂ ಗೃಹಖಾತೆ ಇದೆ. ಆದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಈ ಹಿನ್ನಲೆ ಈಗಾಗಲೇ ಕೊಲ್ಕತ್ತಾ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ. ಆದರೆ ತನ್ನ ಖುರ್ಚಿ ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಹೊಸ ಡ್ರಾಮಾ ಆರಂಭಿಸಿದ್ದಾರೆ.

    ಸದ್ಯ ಈಗ ಮಮತಾ ಬ್ಯಾನರ್ಜಿ ಖುದ್ದು ತಾವೇ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಾದ ಘಟನೆಯನ್ನು ಅಭಯಾ ಪ್ರಕರಣ ಎಂದು ಹೆಸರಿಸಿ ರಸ್ತೆಗಿಳಿದು ಱಲಿಯನ್ನು ಮಾಡಿದ್ರು. ನಿರ್ಭಾಯದ ರೀತಿಯಲ್ಲಿಯೇ ಈ ಘಟನೆಯನ್ನು ಅಭಯಾ ಎಂದು ಕರೆಯುವ ಮೂಲಕ ಬೀದಿಗಿಳಿದು ಱಲಿ ನಡೆಸಿದ ದೀದಿ. ಬಿಜೆಪಿ ಹಾಗೂ ಎಡಪಕ್ಷಗಳು ಈ ಘಟನೆಯನ್ನು ರಾಜಕೀಯಗೊಳಿಸುತ್ತಿದೆ. ಪ್ರಕರಣದಲ್ಲಿ ಯಾರೇ ಇದ್ದರೂ ಕೂಡ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಮತ್ತೊಮ್ಮೆ ಈ ರೀತಿಯಾದ ಕೆಲಸಕ್ಕೆ ಕೈಹಾಕುವವರು ಸಾವಿರ ಬಾರಿ ಯೋಚನೆ ಮಾಡಬೇಕು ಅಂತಹ ಶಿಕ್ಷೆ ಅಪರಾಧಿಗಳಿಗೆ ಆಗಬೇಕು ಅಂತ ಕಿಡಿಕಾರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply