LATEST NEWS
ಮಂಗಳೂರು: ಕರೋನಾ ವೈರಸ್ ಪರಿಣಾಮ ಮದುವೆ ಮುಂದಕ್ಕೆ
ಮಂಗಳೂರು: ಕರೋನಾ ವೈರಸ್ ಪರಿಣಾಮ ಮದುವೆ ಮುಂದಕ್ಕೆ
ಮಂಗಳೂರು ಫೆಬ್ರವರಿ 8: ಕೊರೊನಾ ವೈರಸ್ ಕಾರಣದಿಂದ ಫೆಬ್ರವರಿ 10 ರಂದು ನಡೆಯಬೇಕಾಗಿದ್ದ ಮದುವೆಯೊಂದನ್ನು ಮುಂದೂಡಲಾಗಿದೆ. ಮಂಗಳೂರಿನ ಹೊರವಲಯದ ಕುಂಪಲದ ನಿವಾಸಿ ಗೌರವ್ ಎನ್ನುವ ಯುವಕನ ಮದುವೆ ಫೆಬ್ರವರಿ 10 ಕ್ಕೆ ನಿಶ್ಚಯಿಸಲಾಗಿತ್ತು. ಆದರೆ ಯುವಕ ಸರಿಯಾದ ಸಮಯಕ್ಕೆ ಊರಿಗೆ ಬರಲಾಗದ ಹಿನ್ನಲೆಯಲ್ಲಿ ಮದುವೆಯನ್ನು ಮುಂದೂಡಲಾಗಿದೆ.
aಗೌರವ್ ಹಾಂಕಾಂಗ್, ಸಿಂಗಾಪುರ ಹಾಗೂ ಥೈವಾನ್ ನಡುವೆ ಸಂಚರಿಸುವ ಪ್ರವಾಸಿ ಹಡಗಿನಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಫೆಬ್ರವರಿ 4 ರಂದು ಊರಿಗೆ ಬರುವುದಾಗಿ ತಿಳಿಸಿದ್ದರು. ಆದರೆ ಹಾಂಕಾಂಗ್ ನಲ್ಲಿ 1700 ಪ್ರವಾಸಿಗರಿದ್ದ ಹಡಗಿನಲ್ಲಿ ಹಲವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕೆ ಹಿನ್ನಲೆಯಲ್ಲಿ ಹಡಗನ್ನು ತಟಕ್ಕೆ ಬರದಂತೆ ತಡೆ ಹಿಡಿಯಲಾಗಿದೆ. ಈ ಕಾರಣದಿಂದಾಗಿ ಗೌರವ್ ಕೂಡಾ ಹಡಗಲ್ಲೇ ಉಳಿಯುವಂತಾಗಿದೆ.