Connect with us

LATEST NEWS

ಪೆಟ್ರೋಲ್ ದರ ಏರಿಕೆ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ದಾಖಲೆ ಮಟಕ್ಕೆ ಏರಿಕೆಯಾಗುತ್ತಿದ್ದು, ಕೇಂದ್ರ ಸರಕಾರದ ವಿರುದ್ದ ದೇಶದಾದ್ಯಂತ ಬಾರೀ ಆಕ್ರೋಶ ವ್ಯಕ್ತವಾಗಿದೆ. ಈಗ ಪೆಟ್ರೋಲ್‌ ಬೆಲೆ ಏರಿಕೆ ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಕಿಡಿಕಾರಿದ್ದಾರೆ.


ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 90 ರೂ.ಗೆ ಮಾರಾಟ ಮಾಡುವುದು ಭಾರತ ಸರ್ಕಾರ ಜನರ ಮೇಲೆ ಮಾಡುತ್ತಿರುವ ಶೋಷಣೆಯಾಗಿದ್ದು. ಪೆಟ್ರೋಲ್‌ ರಿಫೈನರಿಗಳಲ್ಲಿ ಪ್ರತಿ ಲೀಟರ್‌ ಬೆಲೆ 30 ರೂ. ಆಗುತ್ತದೆ. ತೆರಿಗೆ ಮತ್ತು ಪೆಟ್ರೋಲ್‌ ಪಂಪ್‌ಗಳ ಕಮಿಷನ್‌ನಿಂದಾಗಿ ಉಳಿದ 60 ರೂ. ಹೆಚ್ಚಳವಾಗುತ್ತದೆ. ನನ್ನ ದೃಷ್ಟಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಅನ್ನು ಗರಿಷ್ಟ 40 ರೂ.ಗೆ ಮಾರಾಟ ಮಾಡಬೇಕು ಎಂದು ಟ್ವೀಟ್‌ ಮಾಡಿದ್ದಾರೆ.


2018ರ ಬಳಿಕ ಮುಂಬೈಯಲ್ಲಿ ಮೊದಲ ಬಾರಿಗೆ ಪೆಟ್ರೋಲ್‌ ಬೆಲೆ 90 ರೂ. ಗಡಿ ದಾಟಿದೆ. ಮುಂಬೈ ಅಲ್ಲದೇ ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 91.50 ರೂ., ಔರಂಗಬಾದ್‌ 91.57 ರೂ., ಇಂದೋರ್‌ 91.58 ರೂ.ಗೆ ಏರಿಕೆಯಾಗಿದೆ.


ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಭಾರತದಲ್ಲಿ ಮತ್ತಷ್ಟು ತೈಲ ದರ ಏರಬಹುದು ಎಂದು ಹೇಳಿದ್ದಾರೆ. ಸೋಮವಾರ ಒಂದು ಬ್ಯಾರಲ್‌ ಬ್ರೆಂಟ್‌ ಕಚ್ಚಾ ತೈಲದ ಬೆಲೆ 48.74 ಡಾಲರ್‌(3,600 ರೂ.) ಆಗಿದ್ದರೆ, ವೆಸ್ಟ್‌ ಟೆಕ್ಸಸ್‌ ಇಂಟರ್‌ಮೀಡಿಯಟ್‌ 45.74 ಡಾಲರ್‌(3,300 ರೂ.)ಗೆ ಏರಿಕೆಯಾಗಿದೆ.  ಲಸಿಕೆ ಪ್ರಯೋಗಗಳು ಯಶಸ್ವಿಯಾಗಿದೆ ಎಂದು ಕಂಪನಿಗಳು ತಿಳಿಸಿದ ಬೆನ್ನಲ್ಲೇ ಭಾರತದಲ್ಲಿ ಕಳೆದ 18 ದಿನಗಳಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 2.65 ರೂ. ಏರಿಕೆ ಆಗಿದ್ದರೆ ಡೀಸೆಲ್‌ ಬೆಲೆ 3.41 ರೂ. ಏರಿಕೆಯಾಗಿದೆ. ಅಬಕಾರಿ ಸುಂಕ, ಡೀಲರ್‌ ಕಮೀಷನ್‌, ರಾಜ್ಯ ಸರ್ಕಾರದ ತೆರಿಗೆ, ಸಾಗಾಟ ವೆಚ್ಚ ಎಲ್ಲ ಸೇರಿ ತೈಲ ಬೆಲೆ ಭಾರತದಲ್ಲಿ ನಿಗದಿಯಾಗುತ್ತದೆ.