ಬೆಳ್ತಂಗಡಿ, ಮಾರ್ಚ್ 12: ತಾಲೂಕಿನ Bandaru ಗ್ರಾಮದಲ್ಲಿರುವ ಮೈರೋಳ್ತಡ್ಕ ಸರಕಾರಿ ಉನ್ನತೀಕರಿಸಿದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗೆ Andekeri Badria Juma Masjid ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಲಾ ವಠಾರದಲ್ಲಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರಶಾಂತ್ ಗೌಡ ನಿರುಂಬುಡ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಚಂದ್ರಾವತಿ, ಮೋಹನ್ ಬಟ್ಟೆಮಾರು, ಶಫೀಕ್ ಅಹ್ಸನಿ ಕಾಮಿಲ್, ಧರ್ಮಗುರುಗಳು ಬಿಜೆಎಮ್ ಅಂಡೆಕೇರಿ, ಅಬ್ದುಲ್ ಹಮೀದ್ (ಅಧ್ಯಕ್ಷರು, ಬಿಜೆಎಮ್ ಅಂಡೆಕೇರಿ), ಅಬ್ದುಲ್ ಕರೀಂ (ಸದಸ್ಯರು, ಗಲ್ಫ್ ಕಮಿಟಿ ಅಧ್ಯಕ್ಷರು), ಶಬೀರ್ ಅಂಡೆಕೇರಿ (ಕಾರ್ಯದರ್ಶಿ, ಗಲ್ಫ್ ಕಮಿಟಿ), ಇಬ್ರಾಹಿಂ ದಾರಿಮಿ (ಕಾರ್ಯದರ್ಶಿ, ಬಿಜೆಎಮ್ ಅಂಡೆಕೇರಿ), ಅಬ್ಬಾಸ್ ಮೈರೋಳ್ತಡ್ಕ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಶುದ್ಧ ನೀರಿನ ಘಟಕದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಕುಡಿಯುವ ನೀರು ಲಭ್ಯವಾಗಲಿದ್ದು, ಇದರ ಮೂಲಕ ವಿದ್ಯಾರ್ಥಿಗಳ ಆರೋಗ್ಯ ಕಾಪಾಡಲು ಸಹಾಯಕವಾಗಲಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.