BANTWAL
ವಿಟ್ಲ ನಿಯಂತ್ರಣ ತಪ್ಪಿ ಅಂಗಡಿಗೆ ಕಾರು ಡಿಕ್ಕಿ, ಓರ್ವನಿಗೆ ಗಾಯ, ಅಂಗಡಿ ಧ್ವಂಸ..!
ವಿಟ್ಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
ವಿಟ್ಲ-ಕಾಸರಗೋಡು ರಸ್ತೆಯ ಕಾಶಿಮಠ ಎಂಬಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು ಕಾರು ಡಿಕ್ಕಿಗೆ ಅಂಗಡಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಉಕ್ಕುಡ ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಯೋಗೀಶ ಕಾಶಿಮಠ ಅವರಿಗೆ ಸೇರಿದ ಅಂಗಡಿಗೆ ಢಿಕ್ಕಿ ಹೊಡೆದಿದೆ. ಕಟ್ಟಡ ಮತ್ತು ಅಂಗಡಿಯಲ್ಲಿದ್ದ ಬೆಲೆಬಾಳುವ ವಸ್ತುಗಳು ಹಾನಿಗೊಂಡಿದೆ. ಕಾರು ಚಾಲಕ ಮದ್ಯ ಸೇವಿಸಿ ಕಾರು ಚಲಾಯಿಸಿದ ಪರಿಣಾಮ ಕಾರು ರಸ್ತೆಯಿಂದ ನೇರವಾಗಿ ಬದಿಗೆ ಸರಿದು ಅಂಗಡಿ ಮೇಲೆ ಎರಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಂಟ್ವಾಳ : ಪರಂಗಿಪೇಟೆ ಹೆದ್ದಾರಿಯಲ್ಲಿ ಉರುಳಿದ ಖಾಸಾಗಿ ಬಸ್, 10 ಕ್ಕೂ ಅಧಿಕ ಮಂದಿಗೆ ಗಾಯ..!
You must be logged in to post a comment Login