Connect with us

    BANTWAL

    ವಿಟ್ಲ: ಅಂಗಡಿ ಬಾಗಿಲು ಮುಚ್ಚಿ ಬಟ್ಟೆ ವ್ಯಾಪಾರ – ಪ್ರಕರಣ ದಾಖಲು

    ವಿಟ್ಲ, ಮೇ 10: ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಬಟ್ಟೆ ಅಂಗಡಿ ತೆರೆದು ವ್ಯಾಪಾರ ಮಾಡಿದ ಆರೋಪದಲ್ಲಿ ವಿಟ್ಲದ ಎರಡು ಅಂಗಡಿ ಮಾಲಕರ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕ್ಯೂಬಿ ಬಟ್ಟೆ ಅಂಗಡಿ ಮಾಲಕ ಮತ್ತು ಫಿಟ್‌ ಫ್ಯಾಷನ್‌ ಬಟ್ಟೆ ಅಂಗಡಿ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೋವೀಡ್‌-19 ನಿಯಂತ್ರಿಸುವ ಬಗ್ಗೆ ರಾಜ್ಯ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ,

    ಮೇ 7ರಂದು ಬೆಳಿಗ್ಗೆ 7 ಗಂಟೆಗೆ ಪರಿಶೀಲನೆ ಅಂಗಡಿಗಳು ತೆರೆದಿರುವ ಬಗ್ಗೆ ಪರಿಶೀಲನೆ ಮಾಡುತ್ತಿರುವಾಗ ಪುತ್ತೂರು ರಸ್ತೆಯಲ್ಲಿರುವ ಕ್ಯೂಬಿ ಬಟ್ಟೆ ಅಂಗಡಿ ಹಾಗೂ ಫಿಟ್‌ ಪ್ಯಾಸನ್‌ ಬಟ್ಟೆ ಅಂಗಡಿ ಮಾಲಕರು ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದು, ಅಂಗಡಿಯಲ್ಲಿ ಗ್ರಾಹಕರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ವ್ಯವಹರಿಸಿರುವುದು ಕಂಡು ಬಂದಿದೆ.

    ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದ್ದು. ಅದರಂತೆ ಎರಡು ಅಂಗಡಿ ಮಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply