ವಿಟ್ಲ, ಮಾರ್ಚ್ 26: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ-ಪುತ್ತೂರು ರಸ್ತೆಯ ಕಂಬಳಬೆಟ್ಟು ಎಂಬಲ್ಲಿ ಮಾರ್ಚ್ 26ರಂದು ಸಂಭವಿಸಿದೆ.

ಚಾಲನೆಯಲ್ಲಿದ್ದ ಕಾರು ಹಠಾತ್ತನೆ ಚಾಲಕನ ಹತೋಟಿ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಜಜ್ಜಲ್ಪಟ್ಟಿದ್ದು, ವಾಹನಕ್ಕೆ ಭಾರೀ ಹಾನಿ ಉಂಟಾಗಿದೆ. ಅದೃಷ್ಟವಶಾತ್, ಅಪಘಾತ ಸಂಭವಿಸಿದ ತಕ್ಷಣವೇ ಕಾರಿನಲ್ಲಿದ್ದ ಏರ್ ಬ್ಯಾಗ್ಗಳು ತೆರೆದುಕೊಂಡಿದ್ದರಿಂದ, ಒಳಗಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.