ಹೊಸ ಕಾರಿನ ಮೇಲಿನ ಪ್ರೀತಿಗೆ ಮಹಾರಾಷ್ಟ್ರದ ದಂಪತಿ, ತಮ್ಮ ಹೊಸ ಕಾರನ್ನು ಡೆಲಿವರಿ ಪಡೆಯುವ ವೇಳೆ ಹಾಕಿಕೊಂಡ ಬಟ್ಟೆಯಲ್ಲಿ ಕಾರಿನ ಹೆಸರನ್ನು ಎಂಬ್ರಾಯಿಡರಿಂಗ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.


ಅವಿನಾಶ್ ರೂಪನೂರ್ ಮತ್ತು ಪತ್ನಿ ರಿಯಾ ಅವಿನಾಶ್ ಅವರು ಟಾಟಾ ಪಂಚ್ ಕಾರಿನ ಡೆಲಿವರಿಯನ್ನು ತೆಗೆದುಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದ ಹೈಲೈಟ್ಸ್ ರಿಯಾ ಅವರ ಸೀರೆ ಮತ್ತು ಬ್ಲೌಸ್. ಕಾರಿನ ಕಲರ್​ ಆದ ಡೇಟೋನಾ ಗ್ರೇಗೆ ಹೊಂದಿಕೆಯಾಗುವಂತೆ ಅವರು ಸೀರೆ ಧರಿಸಿದ್ದರು.
ಸೀರೆಯ ಬಾರ್ಡರ್ ಅನ್ನು ಟಾಟಾ ಲೋಗೋದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಬ್ಲೌಸ್‌ನ ಹಿಂಭಾಗದಲ್ಲಿ ಪಂಚ್ ಎಂಬ ಪದವನ್ನು ದೊಡ್ಡ ಅಕ್ಷರಗಳಲ್ಲಿ ಎಂಬ್ರಾಯಿಡರಿಂಗ್ ಮಾಡಲಾಗಿದೆ.

ಈ ವಿಡಿಯೋದಲ್ಲಿ ಕಾರಿಗೆ ಆರತಿ ಅರ್ಪಿಸಿ ಪೂಜೆ ಮಾಡುವ ದೃಶ್ಯಗಳನ್ನು ತೋರಿಸಲಾಗಿದೆ. ಕಾರು ಖರೀದಿಸುವುದು ಮಾತ್ರವಲ್ಲದೆ, ಅದಕ್ಕೆ ಹೊಂದಿಕೆಯಾಗುವ ಉಡುಪನ್ನು ವಿನ್ಯಾಸಗೊಳಿಸುವುದು ಕೂಡ ಈ ಡೆಲಿವರಿಯನ್ನು ವಿಶೇಷವಾಗಿಸಿದೆ.

2 ಮಿಲಿಯನ್ ವೀಕ್ಷಣೆ ಪಡೆದ ವಿಡಿಯೋ: ಈ ವಿಡಿಯೋ ಪೋಸ್ಟ್ ಮಾಡಿದ ಕೆಲವೇ ದಿನಗಳಲ್ಲಿ, 2.1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ಕಾರು ಪಂಚ್, ಬ್ಲೌಸ್ ಕೂಡ ಪಂಚ್ ಎಂದು ನೆಟಿಜನ್‌ಗಳು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಟಾಟಾ ಪಂಚ್ ಎಂದರೆ ಸಾಮಾನ್ಯರ ಹೃದಯ ಬಡಿತ ಮತ್ತು ಕಾರಿನ ಬಗ್ಗೆ ಅಂತಹ ಪ್ರೀತಿಯನ್ನು ತೋರಿಸುವುದು ಅದ್ಭುತವಾಗಿದೆ ಎಂದು ಮತ್ತೆ ಕೆಲವರು ಹೊಗಳುತ್ತಿದ್ದಾರೆ.

Share Information