ಮಂಗಳೂರು, ಡಿಸೆಂಬರ್ 25: ಆಟೋ ಮತ್ತು ಲಾರಿಗಳ ಹಿಂದೆ ವಿಭಿನ್ನ ರೀತಿಯಲ್ಲಿ ಸಾಲುಗಳನ್ನು ಬರೆದು ಹಾಕುವವರು ನೋಡಿದ್ದೀರಿ ಆದರೆ ಇಲ್ಲೊಬ್ಬರು ಕಾರಿನ ಹಿಂದೆ ಒಂದು ಸಾಲನ್ನು ಬರೆದಿದ್ದು, ಅದು ಇದೀಗ ವೈರಲ್ ಆಗಿದೆ.


ಮಂಗಳೂರಿನ (Manglore) ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರ್‌ನ ಹಿಂಭಾಗದಲ್ಲಿ ಬರೆದ ಸಾಲುಗಳು ಉಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಂತಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ ಕ್ರಿಡಿಬಲ್ ಮಂಗಳೂರು (incrediblemangloree) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹಿಂಬದಿ ವಾಹನ ಸವಾರರು ಮಾರುತಿ ಸುಜುಕಿ ಆಲ್ಟೋ ಕಾರಿನ ಹಿಂಭಾಗದಲ್ಲಿ ಬರೆಯಲಾದ ಸಾಲುಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಕಾರಿನ ಹಿಂಭಾಗದಲ್ಲಿ ಅಂತರ ಕಾಯ್ದುಕೊಳ್ಳಿ…ಇಎಂಐ ಬಾಕಿ ಇದೆ ಎಂದು ಬರೆದಿರುವುದನ್ನು ಕಾಣಬಹುದು.
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಪಾಪ ಈ ವಾಹನಕ್ಕೆ ಗುದ್ದುವ ಮುನ್ನ ಜೋಕೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ತನ್ನ ಕಾರಿಗೆ ಏನಾದರೂ ಸಮಸ್ಯೆಯಾದಲ್ಲಿ ಸಾಲಕ್ಕೆ ನೀವೇ ಹೊಣೆಗಾರರು ಎಂಬಂತಿದೆ ಈ ಸಾಲು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಈ ವ್ಯಕ್ತಿಯ ನೋವು ಕಾರಿನ ಹಿಂಭಾಗದ ಬರಹವೇ ಹೇಳುತ್ತಿದೆ ಎಂದಿದ್ದಾರೆ.

Share Information