ಕಾರಿನ ಬಿಡಿಭಾಗ ಕದಿಯುತ್ತಿದ್ದ ಕಳ್ಳರಿಗೆ ಧರ್ಮದೇಟು ವಿಡಿಯೋ ವೈರಲ್

ಉಡುಪಿ ನವೆಂಬರ್ 24: ಪರಿಚಯದವರ ಮನೆಗೆ ಕನ್ನ ಕೊರೆದ ಹುಡುಗರಿಗೆ ಸಾರ್ವಜನಿಕರು ಧರ್ಮದೇಟು ನೀಡುತ್ತಿರುವ ವಿಡಿಯೋ ಒಂದು ಸಾಮಾಜಿತ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಉಡುಪಿಯ ಮಣಿಪಾಲದಲ್ಲಿ ನಡೆದಿದೆ ಎನ್ನಲಾದ ಒಂದು ‘ಡಿಶುಂ ಡಿಶುಂ’ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಕಾರ್ ನ ಬಿಡಿಭಾಗಗಳನ್ನು ಕದ್ದ ಹುಡುಗರನ್ನು ಹೊಡೆದು ಪುಡಿಪುಡಿ ಮಾಡಿದ್ದಾರೆ.

ಈ ಇಬ್ಬರು ಚೋರರಿಗೆ ಸಖತ್ತಾಗಿ ಧರ್ಮದೇಟು ಬಿದ್ದಿದೆ. ಏಟು ತಿಂದು ಸುಸ್ತಾದವರು ತಪ್ಪೊಪ್ಪೊಗೆಯನ್ನೂ ಮಾಡಿಕೊಂಡಿದ್ದಾರೆ. ಇಲ್ಲಿ ಆಡಿರುವ ಮಾತುಗಳು ತುಳು ಭಾಷೆಯಲ್ಲಿದ್ದು, ಮೇಲ್ನೋಟಕ್ಕೆ ಮಣಿಪಾಲದಲ್ಲಿ ನಡೆದಿರುವ ಘಟನೆ ಎಂದು ತಿಳಿಯುತ್ತದೆ. ಈ ಕಳ್ಳರು ಪರಿಚಯಸ್ಥರ ಕಾರಿನ ಬಿಡಿಭಾಗಗಳನ್ನೇ ಕದ್ದು ಯಾಮಾರಿಸಿದ್ದಾರೆ ಅನ್ನೋದು ಇಲ್ಲಿನ ಬೈಗುಳದಿಂದ ತಿಳಿಯುತ್ತೆ.

ಕಾರಿನ ಬಿಡಿಭಾಗಗಳಾದ ಗ್ರಿಲ್, ಗಾರ್ಡ್, ಕ್ಯಾಮರಾ ಮಾತ್ರವಲ್ಲ ಎರಡು ಸಾವಿರ ಹಣ ಕೂಡಾ ಕದ್ದಿದ್ದಾರೆ ಎಂದು ತಳಿಯುತ್ತೆ. ಎಷ್ಟು ಬುದ್ದಿವಾದ ಹೇಳಿದ್ರೂ, ಕೇಳಲ್ಲ ಅಂತ ಅಲ್ಲಿದ್ದ ಜನ ಮಾತಾಡಿದ್ದಾರೆ.

ಈ ಬಗ್ಗೆ ಮಣಿಪಾಲ ಠಾಣೆಗೆ ಯಾವುದೇ ದೂರ ಬಂದಿಲ್ಲವಾದರೂ ಚಪ್ಪಲಿ, ಪೈಪ್, ರಾಡ್ ನಿಂದ ಏಟು ತಿಂದು ಒದೆಸಿಕೊಮಡ ವಿಡಿಯೋ ಎಲ್ಲಾ ಕಡೆ ವೈರಲ್ ಆಗಿದೆ.

VIDEO

3 Shares

Facebook Comments

comments