ತಮಿಳುನಾಡು ಸೆಪ್ಟೆಂಬರ್ 13: ವಿಲೇಜ್‌ ಕುಕ್ಕಿಂಗ್‌ ಎಂಬ ಯುಟ್ಯೂಬ್ ಚಾನೆಲ್ ನಿಂದ ದೇಶದಾದ್ಯಂತ ಖ್ಯಾತಿ ಗಳಿಸಿರುವ ತಾತ ಮೊಮ್ಮಕ್ಕಳು ಇದೀಗ ಅಮೇರಿಕಾದಲ್ಲೂ ಅಡುಗೆ ಮಾಡಿದ್ದಾರೆ.


29 ಮಿಲಿಯನ್ ಸಬ್ ಸ್ಕ್ರೈಬರ್ ಇರುವ ಚಾನೆಲ್ ಇದಾಗಿದ್ದು, ಇದೀಗ ಅಮೇರಿಕಾದಲ್ಲೂ ಅಡುಗೆ ಮಾಡುವ ಮಟ್ಟಕ್ಕೆ ಬೆಳೆದಿದ್ದಾರೆ. ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ಅರಂತಂಗಿಯಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಚಿನ್ನ ವೀರಮಂಗಲಂ ಎಂಬ ಹಳ್ಳಿಯೇ ವಿಲೇಜ್‌ ಕುಕ್ಕಿಂಗ್‌ ಚಾನೆಲ್‌ನ ಹುಟ್ಟೂರು.


ವಿಲೇಜ್‌ ಕುಕ್ಕಿಂಗ್‌ ಚಾನೆಲ್‌ನ ರೂಪಾರಿ ವಿ ಸುಬ್ರಮಣಿಯನ್‌ ಅಂದಹಾಗೆ ಹೀಗೆ ಒಟ್ಟಿಗೆ ಸೇರಿ ಅಡುಗೆ ಮಾಡುವವರೆಲ್ಲ ಒಂದೇ ಕುಟುಂಬದವರು ಎಂಬುದೂ ಅಚ್ಚರಿ ಸಂಗತಿ. ಎಲ್ಲರೂ ಸೋದರ ಸಂಬಂಧಿಗಳೇ. ವಿ ಸುಬ್ರಮಣಿಯನ್‌ ಚಾನೆಲ್‌ ಶುರುಮಾಡಿದರೆ, ವಿ ಮುರುಗೇಶನ್, ವಿ ಅಯ್ಯನಾರ್, ಜಿ ತಮಿಳ್‌ ಸೆಲ್ವನ್, ಟಿ ಮುತ್ತುಮಾಣಿಕ್ಕಂ ಮತ್ತು ಅವರ ಅಜ್ಜ ಎಂ ಪೆರಿಯತಂಬಿ ಅಡುಗೆ ಮಾಡುವವರು.


ಹೀಗೆ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅಪಾರ ಮನ್ನಣೆ ಪಡೆದ ವಿಲೇಜ್‌ ಕುಕ್ಕಿಂಗ್‌ ಚಾನೆಲ್‌ ಇದೀಗ ಮೂರು ಕೋಟಿಗೂ ಅಧಿಕ ಚಂದಾದಾರರನ್ನು ಸಂಪಾದಿಸಿದೆ. 2021ರಲ್ಲಿ ಒಂದು ಕೋಟಿ ಚಂದಾದಾರರನ್ನು ಪಡೆದ ಬಳಿಕ ಯೂಟ್ಯೂಬ್‌ನಿಂದ ಡೈಮಂಡ್‌ ಪ್ಲೇ ಬಟನ್‌ ಈ ಚಾನೆಲ್‌ಗೆ ಲಭಿಸಿತ್ತು. ತಮಿಳುನಾಡಿನಲ್ಲಿ ಈ ರೀತಿಯ ಗೌರವಕ್ಕೆ ಪಾತ್ರವಾದ ಮೊದಲ ಯೂಟ್ಯೂಬ್‌ ಚಾನೆಲ್‌ ಇದು.

ಮೊದಲು ಕೇವಲ ತಮ್ಮ ಊರಿನಲ್ಲಿ ಅಡುಗೆ ಮಾಡುತ್ತಿದ್ದ ತಂಡ ನಂತರ ಬೆೇರೆ ಬೇರೆ ರಾಜ್ಯಗಳಲ್ಲೂ ಅಡುಗೆ ಮಾಡಿತ್ತು, ಇದೀಗ ಇದೇ ಮೊದಲ ಬಾರಿಗೆ ಅಮೇರಿಕಾದಲ್ಲಿ ಹೋಗಿ ಅಲ್ಲಿ ತಮಿಳುನಾಡಿನ ಶೈಲಿಯಲ್ಲಿ ಅಡುಗೆ ಮಾಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಹೊಚ್ಚ ಹೊಸ ಕ್ಯಾಮರಾಗಳನ್ನು ಇದೀಗ ಇವರು ಬಳಸುತ್ತಿದ್ದಾರೆ.

Share Information