ಹೊಸದಿಲ್ಲಿ ಫೆಬ್ರವರಿ 5: ರಿಪಬ್ಲಿಕ್ ಭಾರತ್ ಚಾನೆಲ್ ಪ್ರಮುಖ ನಿರೂಪಕ ಪತ್ರಕರ್ತ ವಿಕಾಸ್ ಶರ್ಮ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಕೊರೊನಾ ಸೊಂಕಿನಿಂದ ಉಂಟಾದ ಸಮಸ್ಯೆಗಳಿಂದಾಗಿ ಅವರು ಸಾವನಪ್ಪಿದ್ದಾರೆ ಎಂದು ಹೇಳಲಾಗಿದೆ.
ಅರ್ನಬ್ ಗೋಸ್ವಾಮಿ ಒಡೆತನ ರಿಪಬ್ಲಿಕ್ ಟಿವಿಯ ಹಿಂದಿ ವಾರ್ತಾವಾಹಿನಿಯಾದ ರಿಪಬ್ಲಿಕ್ ಭಾರತ್ ನಲ್ಲಿ ಪ್ರಮುಖ ನಿರೂಪಕರಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದರು.


ವಿಕಾಸ್ ಶರ್ಮ ಅವರಿಗೆ ಕೆಲವು ದಿನಗಳ ಹಿಂದೆ ಜ್ವರ ಬಂದ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ವಿಕಾಸ್ ಶರ್ಮಾ ಅವರು ರಾತ್ರಿ 9 ಗಂಟೆಗೆ ರಿಪಬ್ಲಿಕ್ ಭಾರತ್ ಟಿವಿಯಲ್ಲಿ ‘ಯೆ ಭಾರತ್ ಕಿ ಬಾತ್ ಹೈ’ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದ್ದರು. ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ವಿಕಾಸ್ ಶರ್ಮಾ ಅವರ ನಿಧನದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ವಿಕಾಸ್ ಶರ್ಮಾ ಅವರ ನಿಧನವು ರಿಪಬ್ಲಿಕ್ ನೆಟ್ ವರ್ಕ್ ದೊಡ್ಡ ನಷ್ಟವನ್ನುಂಟು ಮಾಡಿದ್ದು, ವಿಕಾಸ್ ಶರ್ಮಾ ವಿಭಿನ್ನ ಶೈಲಿಯ ನಿರೂಪಣೆಯಿಂದ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು ಎಂದು ಗೋಸ್ವಾಮಿ ತಿಳಿಸಿದರು.

Share Information