ಉಜಿರೆ, ಮಾರ್ಚ್ 04: ಉಜಿರೆಯ Janardana Temple Ujireನಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಿರ್ಮಿಸಲಾದ ನೂತನ ವಿಜಯಗೋಪುರದ ಲೋಕಾರ್ಪಣಾ ಕಾರ್ಯಕ್ರಮ ಮಂಗಳವಾರ ಭಕ್ತಿಭಾವದೊಂದಿಗೆ ಜರುಗಿತು.

ಧರ್ಮಸ್ಥಳ ಧರ್ಮಾಧಿಕಾರಿ D. Veerendra Heggade ಅವರು ವಿಜಯಗೋಪುರವನ್ನು ಲೋಕಾರ್ಪಣೆಗೊಳಿಸಿದರು. ಕಾಸರಗೋಡು ಎಡನೀರು ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಬಾರ್ಕೂರು ಶ್ರೀ ನವಾಕ್ಷರೀ ಸಂಸ್ಕೃತಿ ಚಿಂತಕ ದಾಮೋದರ ಶರ್ಮ, ಜಿಲ್ಲಾ ಉಸ್ತುವಾರಿ ಸಚಿವ Dinesh Gundu Rao, ಡಿ. ಹರ್ಷೇಂದ್ರ ಕುಮಾರ್ ಧರ್ಮಸ್ಥಳ, ಶಾಸಕ Harish Poonja, ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಉದ್ಯಮಿ ಶ್ರೀಪತಿ ಭಟ್, ಮಾಜಿ ಶಾಸಕ ಹೆಚ್.ಎಂ. ರಮೇಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಇದೇ ವೇಳೆ ಹಿಂದೂ ರಾಷ್ಟ್ರ ಸಭಾ ರಾಜ್ಯಾಧ್ಯಕ್ಷ ಪ್ರತಾಪ್ ಆರ್. ಗೌಡ, ಆರ್.ಪಿ. ಗ್ರೂಪ್ ಮಾಲಕ ಕರವೇ ರಾಮಮೂರ್ತಿ, ಪವಿತ್ರಪಾಣಿ ಶಿವರಾಮ ಪಡ್ವೆಟ್ನಾಯ, ವಿಜಯಗೋಪುರ ಸಮಿತಿ ಪ್ರಧಾನ ಸಂಚಾಲಕ ಕೆ. ಮೋಹನ್ ಕುಮಾರ್, ಕೋಶಾಧಿಕಾರಿ ರಾಜೇಶ್ ಪೈ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಸಫಲ್ಯ, ಮಹಿಳಾ ವಿಭಾಗ ಸಂಚಾಲಕಿ ಜಯಶ್ರೀ ಪ್ರಕಾಶ ಗೌಡ, ಅನಂತಮೋಹನ ಮೂಡಣ್ಣಾಯರು, ಮಂಜುನಾಥ, ಮಾತೃಶಕ್ತಿ ಶಿಲಾ ಸಂಚಯನ ಅಧ್ಯಕ್ಷೆ ವನಿತಾ ವಿಶ್ವನಾಥ ಶೆಟ್ಟಿ ಸೇರಿದಂತೆ ಗೌರವ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿಜಯಗೋಪುರ ನಿರ್ಮಾಣದಿಂದ ದೇವಸ್ಥಾನದ ವೈಭವ ಹೆಚ್ಚಾಗಿದ್ದು, ಭಕ್ತರಲ್ಲಿ ಹರ್ಷದ ವಾತಾವರಣ ಮೂಡಿತ್ತು.