ಹಿಂದುಗಳ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದ ಹಣವನ್ನು ವ್ಯಕ್ತಿಗತ ಪ್ರಚಾರಕ್ಕಾಗಿ ಬಳಕೆ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್  ತೀವ್ರವಾಗಿ ಖಂಡಿಸಿದೆ.

ಮಂಗಳೂರು : ಹಿಂದುಗಳ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಳದ ಹಣವನ್ನು ವ್ಯಕ್ತಿಗತ ಪ್ರಚಾರಕ್ಕಾಗಿ ಬಳಕೆ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್  ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ದಿನಾಂಕ 25 ನವೆಂಬರ್ 2025 ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಚಂಪಾ ಷಷ್ಟಿ ಕಾರ್ಯಕ್ರಮದ ಜಾಹೀರಾತನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಲಾಗಿದ್ದು ಅದರಲ್ಲಿ ದೇವತಾ ಕಾರ್ಯಕ್ಕಿಂತ ವ್ಯಕ್ತಿಗತ ಪ್ರಚಾರಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದು ರಾಜಕೀಯ ನಾಯಕರ ಮತ್ತು ಇತರರ ಭಾವಚಿತ್ರ ಗಳೊಂದಿಗೆ ಪ್ರಕಟವಾಗಿದೆ. ದೇವಸ್ಥಾನದ ಅಥವಾ ಧಾರ್ಮಿಕ ದತ್ತಿ ಇಲಾಖೆಯ ಹಣ ಈ ರೀತಿ ದುರುಪಯೋಗ ಪಡಿಸುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆ. ದೇವಸ್ಥಾನದ ಮಹತ್ವ ಅಥವಾ ಷಷ್ಟಿ ಮಹೋತ್ಸವದ ಮಹತ್ವ ಹಾಗೂ ಕಾರ್ಯಕ್ರಮದ ಪೂರ್ಣ ವಿವರ ಕೊಡುವ ಬದಲು ರಾಜಕೀಯ ನಾಯಕರ ಪ್ರಚಾರಕ್ಕೆ ಇಂತಹ ಹಣ ದುರುಪಯೋಗ ಮಾಡಿದ್ದು ಸರಿಯಲ್ಲ . ಸದ್ರಿ ಪ್ರಕಟಣೆಯಲ್ಲಿ ಇಲಾಖೆ ಹೆಸರು ಬರೆಯುವಾಗ ಹಿಂದೂ ಹೆಸರನ್ನು ಬಿಟ್ಟಿರುವುದನ್ನು ಕೂಡ ನಾವು ಖಂಡಿಸುತೇವೆ ಇನ್ನು ಮುಂದೆ ಇಲಾಖೆಯ ಪೂರ್ಣ ಹೆಸರು ಪ್ರಕಟಿಸಬೇಕೆಂದೂ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.

 

Share Information