Connect with us

    LATEST NEWS

    ಹಿಂದೂ ಸಂಪ್ರದಾಯಗಳ ಕುರಿತ ಜ್ಞಾನದ ಕೊರತೆಯೇ ಮತಾಂತರಕ್ಕೆ ಕಾರಣ – ಡಾ. ಡಿ. ವೀರೇಂದ್ರ ಹೆಗಡೆ

    ಹಿಂದೂ ಸಂಪ್ರದಾಯಗಳ ಕುರಿತ ಜ್ಞಾನದ ಕೊರತೆಯೇ ಮತಾಂತರಕ್ಕೆ ಕಾರಣ – ಡಾ. ಡಿ. ವೀರೇಂದ್ರ ಹೆಗಡೆ

    ಮಂಗಳೂರು ಡಿಸೆಂಬರ್ 27: ಹಸಿವು, ಬಡತನದಿಂದಾಗಿ ಇಂದು ಮತಾಂತರ ನಡೆಯುತ್ತಿಲ್ಲ, ನೈತಿಕ ಶಿಕ್ಷಣ ಹಾಗೂ ಹಿಂದೂ ಸಂಪ್ರದಾಯಗಳ ಕುರಿತ ಜ್ಞಾನದ ಕೊರತೆಯೇ ಮತಾಂತರಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.

    ಮಂಗಳೂರಿನಲ್ಲಿ ನಡೆಯುತ್ತಿರುವ ಐದು ದಿನಗಳ ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ವಿಶ್ವಸ್ಥ ಮಂಡಳಿ ಸಭೆಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಅತೀ ಶೀಘ್ರವಾಗಿ ನಿರ್ಮಾಣವಾಗಬೇಕಿದೆ ಎಂದ ಅವರು ರಾಮಮಂದಿರ ನಿರ್ಮಾಣಕ್ಕೆ ಇಷ್ಟೊಂದು ವಿಘ್ನ ಎದುರಾಗಲಿ ರಾಮನ ಜನ್ಮ ಕುಂಡಲಿಯೂ ಕಾರಣವಾಗಿರಬಹುದು ಎಂದಿದ್ದಾರೆ.

    ರಾಮನ ಹುಟ್ಟಿನಿಂದ ಪಟ್ಟಾಭಿಷೇಕದ ವರೆಗೂ ನಿರಂತರವಾಗಿ ವಿಘ್ನಗಳು ಎದುರಾಗಿರುವುದನ್ನು ವಿವರಿಸಿದ ಅವರು ಇದೀಗ ಎಲ್ಲಾ ವಿಘ್ನಗಳು ಮಾಯವಾಗಿ ಮಂದಿರ ನಿರ್ಮಾಣಕ್ಕೆ ಸಮಯ ಕೂಡಿ ಬಂದಿದೆ ಎಂದರು. ಹಸಿವು, ಬಡತನದಿಂದಾಗಿ ಇಂದು ಮತಾಂತರ ನಡೆಯುತ್ತಿಲ್ಲ, ನೈತಿಕ ಶಿಕ್ಷಣ ಹಾಗೂ ಹಿಂದೂ ಸಂಪ್ರದಾಯಗಳ ಕುರಿತ ಜ್ಞಾನದ ಕೊರತೆಯೇ ಮತಾಂತರಕ್ಕೆ ಕಾರಣವಾಗುತ್ತಿದೆ ಎಂದು ಅವರು ಹೇಳಿದರು.

    ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ ಕೊಕಾಜೆ ಹಿಂದೂ ಸಮಾಜದಲ್ಲಿರುವ ಹಲವು ನ್ಯೂನ್ಯತೆಗಳನ್ನು ಸರಿಪಡಿಸುವ ಕಾರ್ಯವನ್ನು ವಿಶ್ವ ಹಿಂದೂ ಪರಿಷತ್ ನಿರಂತರವಾಗಿ ಮಾಡಿದೆ. ದಲಿತರನ್ನು ಇಂದು ಹಿಂದೂ ಧರ್ಮದಿಂದ ದೂರ ಮಾಡುತ್ತಿರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದ್ದು, ಈ ಪ್ರಯತ್ನಗಳು ಹಿಂದೂಗಳಿಂದಲೇ ನಡೆಯುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ವಿಶ್ವ ಹಿಂದೂ ಪರಿಷತ್ ನ ಹಿಂದಿನ ಕೆಲಸಗಳು ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆಯೂ ಪ್ರತಿನಿಧ ಮಂಡಳಿ ತೀರ್ಮಾನಗಳನ್ನು ತೆಗೆದುಕೊಳ್ಳಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ದೇಶ- ವಿದೇಶಗಳಿಂದ ಬಂದ ಸುಮಾರು 400 ಮಿಕ್ಕಿದ ವಿಹಿಂಪ ಪದಾಧಿಕಾರಿಗಳು ಬೈಠಕ್ ನಲ್ಲಿ ಪಾಲ್ಗೊಂಡಿದ್ದಾರೆ. ಐದು ದಿನಗಳ ಕಾಲ ಈ ಸಭೆ ನಡೆಯಲಿದ್ದು, ದೇಶದ ಎಲ್ಲಾ ವಿಚಾರಗಳ ಕುರಿತೂ ಚರ್ಚೆ ನಡೆಯಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply