Connect with us

LATEST NEWS

ಉದ್ಯಮದಲ್ಲಿ ಭಾರಿ ನಷ್ಟ ಆಡಳಿತ ಮಂಡಳಿಗೆ ಇಮೇಲ್ ಮಾಡಿ ಕಾಫಿ ಕಿಂಗ್ ಸಿದ್ದಾರ್ಥ ನಾಪತ್ತೆ ?

ಉದ್ಯಮದಲ್ಲಿ ಭಾರಿ ನಷ್ಟ ಆಡಳಿತ ಮಂಡಳಿಗೆ ಇಮೇಲ್ ಮಾಡಿ ಕಾಫಿ ಕಿಂಗ್ ಸಿದ್ದಾರ್ಥ ನಾಪತ್ತೆ ?

ಮಂಗಳೂರು ಜುಲೈ 30: ಕಾಫಿ ಕಿಂಗ್, ಮಾಜಿ ಸಿಎಂ ಎಸ್ .ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ ನಾಪತ್ತೆ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು ಮೂರು ದಿನಗಳ ಹಿಂದೆಯೆ ತಮ್ಮ ಕಂಪೆನಿಯ ಆಡಳಿತ ಮಂಡಳಿಗೆ ಇಮೇಲ್ ಮಾಡಿರುವ ಸಿದ್ದಾರ್ಥ ತಮ್ಮ ವ್ಯವಹಾರದಲ್ಲಿ ಆಗಿರುವ ನಷ್ಟದ ಬಗ್ಗೆ ತೋಡಿಕೊಂಡಿದ್ದಾರೆ.

ಸಿದ್ದಾರ್ಥ ಅವರ ಉದ್ಯಮದಲ್ಲಿ ಭಾರಿ ನಷ್ಟ ಉಂಟಾಗಿದ್ದು, 8 ಸಾವಿರ ಕೋಟಿಗೂ ಅಧಿಕ ನಷ್ಟ ಆಗಿದೆ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ತಮ್ಮ ಕಂಪೆನಿ ಸಿಬ್ಬಂದಿಗಳಿಗೆ ಜುಲೈ 27 ರಂದು ಮಂಡಳಿ ಸದಸ್ಯರಿಗೆ ಇಮೇಲ್ ಮಾಡಿದ್ದರು.

ಇಮೇಲ್ ನಲ್ಲಿ ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

ಕೆಫೆ ಕಾಫಿ ಡೇ ವ್ಯವಹಾರದಲ್ಲಿ ಸಿದ್ಧಾರ್ಥ ಅವರಿಗೆ ಭಾರಿ ನಷ್ಟವಾಗಿತ್ತು. 8 ಸಾವಿರ ಕೋಟಿ ರೂ.ವರೆಗೂ ನಷ್ಟವಾಗಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೂಡಿಕೆಯನ್ನು ಹಿಂದಿರುಗಿಸುವಂತೆ ನಿರ್ದೇಶಕ ಮಂಡಳಿ ಸದಸ್ಯರು ಸಿದ್ಧಾರ್ಥ ಮೇಲೆ ಒತ್ತಡ ಹೇರಿದ್ದರು ಎಂಬ ಅಂಶ ಈಗ ಬಹಿರಂಗವಾಗುತ್ತಿದೆ. ಈ ಎಲ್ಲ ಒತ್ತಡಕ್ಕೆ ಒಳಗಾಗಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿರಬಹುದು. ಹಾಗಾಗಿಯೇ ಅವರು ಉಳ್ಳಾಲ ಬಳಿಯ ನೇತ್ರಾವತಿ ನದಿ ಬಳಿಗೆ ಹೋಗಿ, ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಬಲಗೊಳ್ಳುತ್ತಿದೆ .

Facebook Comments

comments