LATEST NEWS
ಪಿಲಿಕುಳ ಮೃಗಾಲಯದ ಚಿಂಟು ಚಿರತೆಗೆ ಪ್ರಸವ ಶಸ್ತ್ರಚಿಕಿತ್ಸೆ
ಮಂಗಳೂರು ಸೆಪ್ಟೆಂಬರ್ 19: ಮಂಗಳೂರಿನ ಪಿಲಿಕುಳ ಮೃಗಾಲಯದಲ್ಲಿ ಎಂಟು ವರ್ಷ ಪ್ರಾಯದ ಚಿರತೆ ಚಿಂಟುವಿಗೆ ಪ್ರಸವ ಸಮಸ್ಯೆಯಿಂದ ಆರೋಗ್ಯ ಪರಿಸ್ಥಿತಿ ಗಂಭೀರವಾದ ಕಾರಣ ತುರ್ತಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ ಎರಡು ಮೃತಪಟ್ಟ ಮರಿಗಳನ್ನು ಹೊರತೆಗೆಯಲಾಗಿದೆ.
ಶಸ್ತ್ರಚಿಕಿತ್ಸೆಯ ನಂತರ ಚಿಂಟು ಹೆಸರಿನ ಚಿರತೆ ಚೇತರಿಸಿಕೊಳ್ಳುತ್ತಿದೆ. ಮೃಗಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆಯ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಯನ್ನು ಮೃಗಾಲಯದ ವೈದ್ಯಾಧಿಕಾರಿ ಡಾ.ವಿಷ್ಣು ದತ್ತು ಮತ್ತು ಡಾ. ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದರು.
ಎಂಟು ವರ್ಷಗಳ ಹಿಂದೆ ತಾಯಿಯಿಂದ ಪರಿತ್ಯಕ್ತಗೊಂಡಿದ್ದ ಐದು ದಿನದ ಮರಿಯನ್ನು ಮೂಡುಬಿದಿರೆ ಸಮೀಪದಿಂದ ರಕ್ಷಿಸಿ ಪಿಲಿಕುಳ ಮೃಗಾಲಯದಲ್ಲಿ ಚಿಂಟು ಎಂದು ಹೆಸರಿಟ್ಟು ಪೋಷಿಸಿ ಬೆಳೆಸಲಾಗಿದೆ. ಪಿಲಿಕುಳ ಜೈವಿಕ ಉದ್ಯಾನವನ ದಲ್ಲಿ ಒಟ್ಟು 10 ಚಿರತೆಗಳಿವೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ತಿಳಿಸಿದ್ದಾರೆ.
Facebook Comments
You may like
Click to comment
You must be logged in to post a comment Login