ವಿಜಯಬ್ಯಾಂಕ್ ಉಳಿಸಿ ಕಾರ್ಯಕ್ರಮದಲ್ಲಿ ರೈ ಮತ್ತು ವೇದವ್ಯಾಸ್ ಕಾಮತ್ ನಡುವೆ ಮಾತಿನ ಚಕಮಕಿ

ಮಂಗಳೂರು ಫೆಬ್ರವರಿ 23: ಮಂಗಳೂರಿನ ಪುರಭವನದಲ್ಲಿ ನಡೆದ ವಿಜಯ ಬ್ಯಾಂಕ್ ಉಳಿಸಿ ಸರ್ವಪಕ್ಷಗಳ ಸಭೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಹಾಗೂ ಶಾಸಕ ವೇದವ್ಯಾಸ್ ಕಾಮತ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.

ಇಂದು ಮಂಗಳೂರಿನ ಪುರಭವನದಲ್ಲಿ ವಿಜಯ ಬ್ಯಾಂಕ್ ಉಳಿಸಿ ಸರ್ವ ಪಕ್ಷಗಳ ಜನಪ್ರತಿನಿಧಿಗಳ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ವೇದವ್ಯಾಸ್ ಕಾಮತ್ ಎಲ್ಲರನ್ನೂ ಸೇರಿಸಿಕೊಂಡ ಕೇಂದ್ರಕ್ಕೆ ನಿಯೋಗ ಕರೆದುಕೊಂಡು ಹೋಗುವ ಎಂಬ ಹೇಳಿಕೆಗೆ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲರನ್ನು ಒಟ್ಟು ಸೇರಿಸುವ ಜವಾಬ್ದಾರಿ ಜಿಲ್ಲೆಯ ಸಂಸದರದ್ದು ಎಂದ ರಮಾನಾಥ ರೈ ಹೇಳಿದ್ದರು.

ಅಧಿಕಾರದಲ್ಲಿರುವ ನೀವು ಎಲ್ಲರನ್ನು ಸೇರಿಸಿ ನಿಯೋಗ ಕರೆದುಕೊಂಡು ಹೋಗಬೇಕು ಎಂದು ಹೇಳಿದರು. ಈ ಹಿನ್ನಲೆಯಲ್ಲಿ ರಮಾನಾಥ್ ರೈ ಮತ್ತು ಶಾಸಕ ವೇದವ್ಯಾಸ್ ಕಾಮತ್ ನಡುವೆ ಮಾತಿನ ಚಕಮಕಿ ನಡೆದಿದೆ.

VIDEO

Facebook Comments

comments