LATEST NEWS
ಮಂಗಳೂರು ಅನಗತ್ಯವಾಗಿ ರಸ್ತೆಗಿಳಿದ ವಾಹನ ಸೀಜ್ ಮಾಡುತ್ತಿರುವ ಪೊಲೀಸರು
ಮಂಗಳೂರು ಅನಗತ್ಯವಾಗಿ ರಸ್ತೆಗಿಳಿದ ವಾಹನ ಸೀಜ್ ಮಾಡುತ್ತಿರುವ ಪೊಲೀಸರು
ಮಂಗಳೂರು ಎಪ್ರಿಲ್ 3: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಜನ ಅಗತ್ಯ ವಸ್ತಗಳಿಗಾಗಿ ಮನೆ ಬಳಿಯಿರುವ ಅಂಗಡಿಗಳಿಗೆ ಮಾತ್ರ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದ್ದು, ಯಾವುದೇ ಕಾರಣಕ್ಕೂ ತಮ್ಮ ವಾಹನಗಳನ್ನು ಬಳಸದಂತೆ ಎಚ್ಚರಿಕೆಯನ್ನೂ ನೀಡಿದೆ.
ಜಿಲ್ಲಾಡಳಿತ ವಿತರಣೆ ಮಾಡಿದ ಪಾಸ್ ಹೊಂದಿದವರು ಮಾತ್ರ ತಮ್ಮ ವಾಹನಗಳನ್ನು ಬಳಸಲು ಅವಕಾಶವಿದ್ದು, ಅಗತ್ಯ ಸಾಮಾಗ್ರಿಳನ್ನು ಪೂರೈಸುವ ವಾಹನಗಳಿಗೂ ನಿಷೇಧದಿಂದ ವಿನಾಯತಿ ನೀಡಲಾಗಿದೆ. ಸ್ಥಳೀಯ ಮಟ್ಟದಲ್ಲಿರುವ ದಿನಸಿ ವ್ಯಾಪಾರಸ್ಥರು ತಮಗೆ ಬೇಕಾದ ಸಾಮಾಗ್ರಿಗಳನ್ನು ನಿಗದಿಪಡಿಸಿದ ರಖಂ ವ್ಯಾಪಾರಸ್ಥರಿಂದ ಖರೀದಿಸುವ ಅವಕಾಶವನ್ನೂ ನೀಡಲಾಗಿದೆ.
ಇದನ್ನು ಹೊರತುಪಡಿಸಿ ಇತರೆ ವಾಹನಗಳು ರಸ್ತೆಗೆ ಇಳಿದಲ್ಲಿ ಅಂಥ ವಾಹನಗಳನ್ನು ಪೋಲೀಸರು ಜಫ್ತಿ ಮಾಡುವ ಕಾರ್ಯದಲ್ಲೂ ನಿರತರಾಗಿದ್ದಾರೆ. ಗುರುವಾರ ಮಧ್ಯಾಹ್ನ ದಿಂದ ಜಿಲ್ಲೆಯಲ್ಲಿ ಈ ಕಟ್ಟುನಿಟ್ಟಿನ ಆದೇಶ ಜಾರಿಗೆ ಬಂದಿದ್ದು, ನೂರಕ್ಕೂ ಮಿಕ್ಕಿದ ವಾಹನಗಳನ್ನು ಈಗಾಗಲೇ ಸೀಝ್ ಮಾಡಲಾಗಿದೆ.