ಮಹಾಮಸ್ತಕಾಭಿಷೇಕ ಸಂದರ್ಭ ಅವಘಡ ಸಂಭವಿಸುವ ಬಗ್ಗೆ ಮೊದಲೇ ತಿಳಿದಿತ್ತು – ಡಾ. ಡಿ. ವಿರೇಂದ್ರ ಹೆಗ್ಗಡೆ

ಮಂಗಳೂರು ಫೆಬ್ರವರಿ 14: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕದ ಪ್ರಯುಕ್ತ ನಿರ್ಮಿಸಲಾಗಿದ್ದ ಪಂಚಮಹಾ ವೈಭವ ವೇದಿಕೆ ಕುಸಿದಿರುವ ಕುರಿತಂತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆ ಅವರು ಈ ರೀತಿಯ ಯಾವುದೋ ಒಂದು ಅವಘಡ ಸಂಭವಿಸುವ ಸುಳಿವು ಮೊದಲೇ ಸಿಕ್ಕಿತ್ತು ಎಂದು ತಿಳಿಸಿದ್ದಾರೆ.

ಇಂದು ಮಹಾಮಸ್ತಕಾಭಿಷೇಕದ ಸಮಾರಂಭದಲ್ಲಿ ಮಾತನಾಡಿದ ಅವರು ಮಧ್ಯಾಹ್ನ ನಡೆದ ಅವಘಡದ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ತಾತ್ಕಾಲಿಕ ವೇದಿಕೆ ಒಂದು ಗಂಟೆ ಮೊದಲು ನಡೆದಿದ್ದರೆ ನಾವು ನೀವು ಎಲ್ಲರೂ ಅದರ ಒಳಗೆ ಸಿಲುಕಿಗೊಳ್ಳಬೇಕಾಗಿತ್ತು. ಆದರೆ ಧರ್ಮಸ್ಥಳದ ಮಂಜುನಾಥ ಹಾಗೂ ಅಣ್ಣಪ್ಪ ದೇವರ ದಯದಿಂದ ನಾವೆಲ್ಲಾ ಪಾರಾಗಿದ್ದು ಯಾವುದೇ ಸಮಸ್ಯೆ ಯಾಗಿಲ್ಲ ಎಂದು ಹೇಳಿದರು.

ಅಲ್ಲದ ಕಳೆದ 20 ದಿನಗಳಿಂದ ನನ್ನ ಮನಸ್ಸಿನಲ್ಲಿ ಸಿದ್ದತೆಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಗೊಂದಲ ಮೂಡಿತ್ತು ಎಂದು ಹೇಳಿದರು. ಅಲ್ಲದೆ ಮನಸ್ಸಿನಲ್ಲಿನ ಈ ಗೊಂದಲದಿಂದಾಗಿ ಸರಿಯಾಗಿ ನಿದ್ದೆ ಕೂಡ ಬರುತ್ತಿಲ್ಲ ಎಂದು ಹೇಳಿದ ಧರ್ಮಾಧಿಕಾರಿಗಳು, ಈ ಹಿನ್ನಲೆಯಲ್ಲಿ ಜ್ಯೋತಿಷಿ ಒಬ್ಬರ ಹತ್ತಿರ ಪ್ರಶ್ನೆ ಕೇಳಿದ್ದೆ ಎಂದು ಹೇಳಿದರು.

ಜ್ಯೋತಿಷಿಗಳು ಸಲಹೆ ಪ್ರಕಾರ ಯಾವುದೋ ಒಂದು ಘಟನೆ ನಡೆಯುವ ಸಾಧ್ಯತೆ ಇದ್ದು ಅದಕ್ಕಾಗಿ ಕೆಲವು ಪೂಜೆಗಳನ್ನು ಮಾಡಿ ಎಂದು ಹೇಳಿದ್ದರು. ಈ ಪೂಜೆಗಳಿಂದ ನಡೆಯಬೇಕಿದ್ದ ಘಟನೆಯ ತೀವೃತೆ ಕಡಿಮೆಯಾಗಲಿದೆ ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಜ್ಯೊತಿಷಿಯವರು ಹೇಳಿದ ಎಲ್ಲಾ ಪೂಜೆಗಳನ್ನು ಮಾಡಿದ್ದೆ. ಇವತ್ತು ಅವರು ಹೇಳಿದಂತೆ ದೊಡ್ಡ ಘಟನೆ ನಡೆದರೂ ಅದರ ತೀವೃತೆ ಕಡಿಮೆ ಇತ್ತು ಎಂದು ಡಾ.ಡಿ. ವಿರೇಂದ್ರ ಹೆಗ್ಗಡೆ ಯವರು ವೇದಿಕೆ ಕುಸಿತದ ಘಟನೆಯ ಬಗ್ಗೆ ಮಾತನಾಡಿದರು.

ಮಹಾಮಸ್ತಕಾಭಿಷೇಕಕ್ಕೆ ಬಂದಿದ್ದ ಮುನಿವರ್ಯರ ಕಳೆದ ಕೆಲವು ದಿನಗಳಿಂದ ಇಲ್ಲಿ ತಪಸ್ಸನ್ನು ಮಾಡುತ್ತಿದ್ದು ಅದು ಇಂದು ಯಾವುದೇ ರೀತಿಯ ಅಪಾಯ ಸಂಭವಿಸದಂತೆ ಮಾಡಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

VIDEO

Facebook Comments

comments