LATEST NEWS
ವರ್ಕಾಡಿ ಕಾವಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಗುಂಪು ಭಜನೆ ಕಾರ್ಯಕ್ರಮ
ಮಂಗಳೂರು ಮಾರ್ಚ್ 15: ವರ್ಕಾಡಿ ಕಾವಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ದಿ ಹಿನ್ನೆಲೆಯಲ್ಲಿ ಸಾಮೂಹಿಕ ಗುಂಪು ಭಜನೆ ಕಾರ್ಯಕ್ರಮ ನೆರವೇರಿತು.
35 ಕ್ಕಿಂತಲೂ ಹೆಚ್ಚಿನ ತಂಡಗಳು ಒಂದು ಗಂಟೆಗಳ ಕಾಲ ವಿಶೇಷ ಭಜನೆಯಲ್ಲಿ ತೊಡಗಿದವು. ಮಕ್ಕಳು ಮಹಿಳೆಯರು ಹಿರಿಯರು ಕುಣಿತ ಭಜನೆಯಲ್ಲಿ ಪಾಲ್ಗೊಂಡರು.
ರಾಮಕೃಷ್ಣ ಕಾಟುಕುಕ್ಕೆ ನೇತೃತ್ವದಲ್ಲಿ ವಿಶೇಷ ಭಜನಾ ಕಾರ್ಯಕ್ರಮ ನೆರವೇರಿತು. ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ದೇವಸ್ಥಾನದ ಸಭಾಂಗಣದಲ್ಲಿ ಧಾರ್ಮಿಕ ಸಭೆ ನೆರವೇರಿತು.
ಒಡಿಯೂರು ಮಾತಾನಂದಮಯಿ, ದೇವಸ್ಥಾನದ ಪ್ರಮುಖರು,ಸ್ಥಳೀಯ ಜನಪ್ರತಿನಿಧಿಗಳು ಧಾರ್ಮಿಕ ಚಿಂತಕರು ಭಾಗಿಯಾದರು.