ಗುಜರಾತ್ ಫೆಬ್ರವರಿ 20: ಇಕೋ ಕಾರು ಮತ್ತು ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ 7 ಮಂದಿ ಸಾವನಪ್ಪಿದ ಘಟನೆ ಗುಜರಾತ್ನ ವಲ್ಸಾದ್ ಜಿಲ್ಲೆಯ ಕಪ್ರಡಾ ತಹಸಿಲ್ನಲ್ಲಿರುವ ಕುಂಭ್ ಘಾಟ್ನಲ್ಲಿ ಸಂಭವಿಸಿದೆ.

ಮೂಲಗಳ ಪ್ರಕಾರ, ಮೃತರಲ್ಲಿ ಒಂದೇ ಕುಟುಂಬದ ಐದು ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುಟುಂಬ ಕಪ್ರದ ಅಂಬಾ ಜಂಗಲ್ ಗ್ರಾಮದವರಾಗಿದ್ದು, ಇಕೋ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಕುಂಭ ಘಾಟ್ಗೆ ಹೋಗುವ ದಾರಿಯಲ್ಲಿ, ಕಾರು ವೇಗವಾಗಿ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎಕೋ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದೆ.
ಇದನ್ನೂ ಓದಿ – ಡ್ರಗ್ಸ್ ಲೋಕದ ಲೇಡಿ ಡಾನ್ ಮೇಡಂ ಜೆಹರ್ ಅರೆಸ್ಟ್ – ಬ್ಯೂಟಿ ಪಾರ್ಲರ್ ನ ಮಾಲಕಿಯ ಡ್ರಗ್ಸ್ ದಂಧೆ
ಅಪಘಾತದಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಚಿಕಿತ್ಸೆಯ ಸಮಯದಲ್ಲಿ ಇಬ್ಬರೂ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು 108 ಆಂಬ್ಯುಲೆನ್ಸ್ ತಂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ. ಅಪಘಾತದ ಶಬ್ದ ಕೇಳಿ ಹತ್ತಿರದ ಪ್ರದೇಶಗಳ ಜನರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಲು ಸಹಾಯ ಮಾಡಿದರು.