ಪ್ರೇಮಿಗಳ ದಿನಾಚರಣೆ: ಮಂಗಳೂರಿನಲ್ಲಿ ಪೊಲೀಸ್ ಕಟ್ಟೆಚ್ಚರ
ಮಂಗಳೂರು, ಫೆಬ್ರವರಿ 13 : ಪ್ರೇಮಿಗಳ ದಿನಾಚರಣೆ ಅಂಗವಾಗಿ ಮಂಗಳೂರು ನಗರದಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಬಿಗಿ ಕ್ರಮಗಳನ್ನು ಕೈಗೊಂಡಿದೆ,
ರಾಜ್ಯಾದ್ಯಂತ ಅನೇಕ ಸಂಘಟನೆಗಳು ಪ್ರೇಮಿಗಳ ದಿನಾಚರಣೆಗೆ ವಿರೋಧ ವ್ಯಕ್ತಪಡಿಸಿವೆ.
ಆದರೆ ಮಂಗಳೂರಿನಲ್ಲಿ ಅಂತಹ ಯಾವುದೇ ವಿರೋಧದ ಹೇಳಿಕೆಗಳನ್ನು ಇಲ್ಲಿನ ಸಂಘಟನೆಗಳು , ಅಥವಾ ನಿರ್ದಿಷ್ಟ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳು ಇದುವರೆಗೂ ನೀಡಿಲ್ಲ, ಅಥವಾ ವೆಲೆಂಟೈನ್ಸ್ ಡೇ ಗೆ ವಿರೋಧ ವ್ಯಕ್ತಪಡಿಸಿಲ್ಲ,
ಆದರೂ ಮಂಗಳೂರಿನಲ್ಲಿ ಪೊಲಿಸ್ ಇಲಾಖೆ ಮುಂಜಾಗೃತಾ ಕ್ರಮವಾಗಿ ಗಸ್ತು ದಳಗಳನ್ನು ಮಾಡಿ ನಗರಾದ್ಯಂತ ಬಂದೋಬಸ್ತ್ ಗೆ ನಿಯೋಜಿಸಿದೆ.
2 ಡಿಸಿಪಿ ಗಳ ಮೇಲುಸ್ತುವಾರಿಯಲ್ಲಿ, ನಾಲ್ಕು ಎಸಿಪಿಗಳು,16 ಪೋಲೀಸ್ ನಿರೀಕ್ಷಕೆರು, 16 ಪೊಲೀಸ್ ಸಬ್ ಇನ್ಸ್ಸಪೆಕ್ಟರ್ ,450 ಪೊಲಿಸ್ ಸಿಬಂದಿಗಳು, 2 ಕೆಎಸ್ಆರ್ಪಿ ತುಕಡಿಗಳು ಹಾಗೂ ನಗರ ಶಸಸ್ತ್ರ ಮೀಸಲು ಪಡೆಯ 6 ತುಕಡಿಗಳನ್ನು ನಗರದಲ್ಲಿ ಬಂದೋಬಸ್ತಿಗೆ ನಿಯೋಜಿಸಿದೆ.