Connect with us

    LATEST NEWS

    ಲಾಕ್ ಡೌನ್ ಉಲ್ಲಂಘಿಸಿ ಪುರಭವನಕ್ಕೆ ಆಗಮಿಸಿದರೆ ಕಠಿಣ ಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ

    ಲಾಕ್ ಡೌನ್ ಉಲ್ಲಂಘಿಸಿ ಪುರಭವನಕ್ಕೆ ಆಗಮಿಸಿದರೆ ಕಠಿಣ ಕ್ರಮ ಜಿಲ್ಲಾಧಿಕಾರಿ ಎಚ್ಚರಿಕೆ

    ಮಂಗಳೂರು ಎಪ್ರಿಲ್ 29: ಸರಿಯಾದ ಮಾಹಿತಿ ಇಲ್ಲದೆ ಲಾಕ್ ಡೌನ್ ಉಲ್ಲಂಘಿಸಿ ಸಾವಿರಾರು ಜನ ವಲಸೆ ಕಾರ್ಮಿಕರು ಮಂಗಳೂರಿನ ಪುರಭವನದಲ್ಲಿ ಊರಿಗೆ ತೆರಳಲು ಸೇರಿದ ಘಟನೆ ನಂತರ ದಕ್ಷಿಣಕನ್ನಡ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಯಾವುದೇ ವಲಸೆ ಕಾರ್ಮಿಕರು ಮಂಗಳೂರಿನ ಪುರಭವನಕ್ಕೆ ಆಗಮಿಸದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

    ರಾಜ್ಯಸರಕಾರದ ಸೂಚನೆಯಂತೆ ವಲಸೆ ಕಾರ್ಮಿಕರನ್ನು ಅವರ ಸ್ವಗ್ರಾಮಕ್ಕೆ ಹಾಗೂ ಕೆಲಸದ ಸ್ಥಳಗಳಿಗೆ ಕಳುಹಿಸಲು ದಕ್ಷಿಣಕನ್ನಡ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನಲೆ ವಲಸೆ ಕಾರ್ಮಿಕರು ತಾವು ಇರುವ ಸ್ಥಳದಲ್ಲಿಯೇ ಇದ್ದು, ಆಯಾ ವಾಡ್೯ ನಲ್ಲಿ ಸ್ಥಳೀಯ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಿದ್ದಾರೆ. ನಂತರ ಕಾರ್ಮಿಕರಿಗೆ ಪ್ರಯಾಣದ ಬಗ್ಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.

    ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ತಾವು ವಾಸ ಇದ್ದ ಸ್ಥಳದಿಂದ ಲಾಕ್ ಡೌನ್ ಉಲ್ಲಂಘಿಸಿ ಪುರಭವನಕ್ಕೆ ಬರಬಾರದು. ಎಲ್ಲಾ ವಿವರ ಸಂಗ್ರಹಿಸಿದ ನಂತರ ಪ್ರಯಾಣದ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ಒಂದು ವೇಳೆ ಗುತ್ತಿಗೆದಾರರು ಅಥವಾ ಕೆಲಸದ ಮೇಲ್ವಿಚಾರಕರು ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಉದ್ದೇಶದಿಂದ ನಗರಕ್ಕೆ ಕರೆದುಕೊಂಡು ಬಂದರೆ ಅಂತಹವರ ವಿರುದ್ಧ ಪೊಲೀಸ್ ಕ್ರಮ‌ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply