ಸಂಸದೆಯಾಗಿರುವ ಕ್ಷೇತ್ರಕ್ಕೆ ಕಾಲಿಡದ ಶೋಭಾ ಕರಂದ್ಲಾಜೆ ಮಾತಿಗೆ ನಾನು ಕಿವಿಗೊಡಲ್ಲ – ಖಾದರ್

ಮಂಗಳೂರು ಜೂನ್ 30: ಉಡುಪಿ ಚಿಕ್ಕಮಗಳೂರು ಜಿಲ್ಲೆಗೆ ಮುಖ ಹಾಕದ ಸಂಸದೆ ಶೋಭಾ ಕರಂದ್ಲಾಜೆ ಅವರ ಮಾತಿಗೆ ನಾನು ಕಿವಿಕೋಡಲ್ಲ ಎಂದು ಯು.ಟಿ ಖಾದರ್ ಸಂಸದೆ ಶೋಭಾ ಕಂದ್ಲಾಜೆ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ನಡೆಯೋ ಅಕ್ರಮಗಳಿಗೆ ಸಚಿವ ಖಾದರ್ ಅಭಯ ಇದೆ ಎಂದು ಶೋಭಾ ಕರಂದ್ಲಾಜೆ ಆರೋಪ ವಿಚಾರಕ್ಕೆ ತಿರುಗೇಟು ನೀಡಿದ ಅವರು ಜಿಲ್ಲೆಯ ಬಗ್ಗೆ ಅನಗತ್ಯವಾಗಿ ಶೋಭಾ ಕರಂದ್ಲಾಜೆ ಸುಳ್ಳು ಆರೋಪ ಮಾಡಿ ಜಿಲ್ಲೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಇಲ್ಲಿನ ಸ್ಥಿತಿ ಬಿಗಡಾಯಿಸುವಂತೆ ಮಾಡಬಾರದು ಎಂದು ಹೇಳಿದರು.

ದಕ್ಷಿಣಕನ್ನಡ ಜಿಲ್ಲೆಯ ಬಗ್ಗೆ ಮಾತನಾಡಲು ಸಂಸದರು, ಶಾಸಕರು ಮತ್ತು ಪರಿಷತ್ ಸದಸ್ಯರು ಇದ್ದಾರೆ. ಉಡುಪಿ ಚಿಕ್ಕಮಗಳೂರು ಸಂಸದರು ಅವರು ಜಿಲ್ಲೆಗೆ, ಕ್ಷೇತ್ರಕ್ಕೆ ಮುಖ ತೋರಿಸುವುದೇ ಇಲ್ಲ, ಅಲ್ಲಿನ ಜನರು ಇವರನ್ನು ರಿಜೆಕ್ಟ್ ಮಾಡಿದ್ದರೂ ಮೋದಿ ಮುಖದಲ್ಲಿ ಗೆದ್ದಿದ್ದಾರೆ. ಅದನ್ನು ಮೊದಲು ಶೋಭಾ ಕರಂದ್ಲಾಜೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಶೋಭಾ ಅವರ ಆರೋಪಕ್ಕೆ ನಾನು ಕಿವಿ ಕೋಡುವುದಿಲ್ಲ. ನನ್ನದೇನಿದ್ದರೂ ನನ್ನ ಜಿಲ್ಲೆಯ ಸಂಸದರು, ಶಾಸಕರ ಜೊತೆ ಮಾತುಕತೆ, ಇಲ್ಲಿನ ನಾಯಕರು, ಹಿರಿಯರ, ಸ್ವಾಮೀಜಿ, ಧಾರ್ಮಿಕ ಮುಖಂಡರ ಸಲಹೆ ಕೇಳ್ತೇನೆ ಎಂದು ಹೇಳಿದರು. ಅಲ್ಲದೇ ಕೂಡಲೇ ಈ ಬಗ್ಗೆ ಸರ್ವಪಕ್ಷ ಮತ್ತು ಸರ್ವಧರ್ಮದ ಪ್ರತಿನಿಧಿಗಳ ಸಭೆ ನಡೆಸುತ್ತೇನೆ. ಈ ಸಭೆಯಲ್ಲಿ ಬೇಕಾದ್ರೆ ಶೋಭಾ ಅವರು ಸಲಹೆ ಸೂಚನೆ ಕೊಡಲಿ ಎಂದು ಹೇಳಿದರು.

ನಾನು ಉಸ್ತುವಾರಿ ಸಚಿವನಾಗಿ ಸ್ಕಿಲ್ ಗೇಮ್, ಮಸಾಜ್ ಮತ್ತು ಇತರೆ ಅಕ್ರಮ ಬಂದ್ ಮಾಡಿದ್ದೇನೆ. ಮಾಫಿಯಾ ತಲೆ ಎತ್ತಬಾರದು ಎಂದು ಜಿಲ್ಲೆಯ ಶಾಂತಿಗೆ‌ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಗೋ ಸಾಗಾಟ ಹಲ್ಲೆಗೆ ಸಂಬಂಧಿಸಿ ಅಲ್ಪಸಂಖ್ಯಾತರು, ಹಿಂದುಳಿದ ಮತ್ತು ಜನಸಾಮಾನ್ಯರ ಮೇಲೆ ಹಲ್ಲೆ ‌ನಡೆಯುತ್ತಿದೆ ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಹೇಳಿದರು.

VIDEO

Facebook Comments

comments