Connect with us

LATEST NEWS

ಕೊರಗಜ್ಜನ ನೇಮದ ಸಂದರ್ಭ ಮುಸ್ಲಿಂ ಮಹಿಳೆಯೊಬ್ಬರ ಮೇಲೆ ದೈವದ ಆವೇಶ

ಮಂಗಳೂರು : ಕರಾವಳಿಯಲ್ಲಿ ದೇವರಿಗಿಂತಲೂ ದೈವಗಳ ಮೇಲೆ ನಂಬಿಕೆ ಜಾಸ್ತಿ, ಇಲ್ಲಿ ಆರಾಧನೆ ಮಾಡುವ ದೈವಗಳು ಆವೇಶದ ಮೂಲಕ ದರ್ಶನ ನೀಡುತ್ತವೆ ಎಂಬ ನಂಬಿಕೆ ಜನರಲ್ಲಿದೆ.


ಮೂಡಬಿದ್ರೆಯ ಗಂಟಾಲ್ ಕಟ್ಟೆ ಎಂಬಲ್ಲಿ ದೈವದ ದರ್ಶನದ ವೇಳೆ ಮುಸ್ಲಿಂ ಮಹಿಳೆಯೊಬ್ಬರಿಗೆ ಆವೇಶ ಬಂದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಮೂಡಬಿದ್ರೆಯ ಗಂಟಾಲ ಕಟ್ಟೆಯಲ್ಲಿರುವ ಕೊರಗಜ್ಜ ದೈವದ ಗುಡಿಯಲ್ಲಿ ಭಾನುವಾರ ನೇಮ ನಡೆದಿತ್ತು. ದೈವದ ದರ್ಶನ ಪಾತ್ರಿಯು ಆವೇಶಭರಿತರಾಗಿದ್ದ ವೇಳೆ ಕೊರಗಜ್ಜನ ದೈವದ ದರ್ಶನಕ್ಕೆ ಬಂದಿದ್ದ ಮುಸ್ಲಿಂ ‌ಮಹಿಳೆಗೆ ಆವೇಶ ಬಂದಿದೆ. ಈ ವೇಳೆ ಮಹಿಳೆ ತುಳುವಿನಲ್ಲಿ ಆವೇಶಭರಿತವಾಗಿ ಮಾತನಾಡಿದ್ದಾರೆ. ದೈವದ ದರ್ಶನದ ವೇಳೆ ದೈವದ ಪಾತ್ರಿ ಜೊತೆಗೆ ಅಲ್ಲಿಗೆ ಬರುವ ಕೆಲ‌ ಭಕ್ತರ ಮೇಲೆ ಆವೇಶ ಬರುವುದು‌ ನಡೆಯುತ್ತಿರುತ್ತದೆ. ಆದರೆ ಅನ್ಯಧರ್ಮಿಯರೊಬ್ಬರಿಗೆ ಆವೇಶ ಬರುತ್ತಿರುವ ಪ್ರಕರಣಗಳು ವಿರಳವಾಗಿದ್ದು ಈ ಕಾರಣದಿಂದ ಈ ವಿಡಿಯೋ ವೈರಲ್ ಆಗಿದೆ.