Connect with us

    LATEST NEWS

    ಸಾಮಾಜಿಕ ಜಾಲತಾಣದಲ್ಲಿ ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಅಪಪ್ರಚಾರ, ದೂರು ದಾಖಲು

    ಮಂಗಳೂರು ಮಾರ್ಚ್ 25 : ಮುಸ್ಲಿಂರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಣೆಯ ವಿವಾದವನ್ನು ಕೆಲವು ಕಿಡಿಗೇಡಿಗಳು  ಬಳಸಿಕೊಳ್ಳಲಾರಂಭಿಸಿದ್ದು, ದ.ಕ ಜಿಲ್ಲೆಯ ಉಪ್ಪಿನಂಗಡಿಯ ಹಿಂದೂ ಮಾಲೀಕತ್ವದ ಅಂಗಡಿಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರದ ಸಂದೇಶವೊಂದು ಹರಿದಾಡುತ್ತಿದೆ.


    ಉಪ್ಪಿನಂಗಡಿಯ 32 ಹಿಂದೂ ಅಂಗಡಿಗಳ ಹೆಸರು ಉಲ್ಲೇಖಿಸಿ ಅಪಪ್ರಚಾರ ಮಾಡಲಾಗಿದೆ. ಹಿಂದೂ ವರ್ತಕರ ಬೇಕರಿ, ಮೆಡಿಕಲ್, ಸಲೂನ್, ಜನರಲ್ ಸ್ಟೋರ್‌ಗಳ ಹೆಸರಲ್ಲಿ ಸಂದೇಶ ವೈರಲ್ ಆಗಿದೆ. ನಗರದ ವರ್ತಕರ ಸಂಘವು ನಕಲಿ ಸಂದೇಶ ಪ್ರಕಟಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದೆ.

    ಎಲ್ಲಾ ಸಮುದಾಯದವರು ನಮ್ಮ ಗ್ರಾಹಕರು.ಇದನ್ನು ಹಾಳು ಮಾಡುವ ರೀತಿ ಸಂದೇಶ ಕಳುಹಿಸಲಾಗಿದೆ. ಮತೀಯ ಸಾಮರಸ್ಯ ಹಾಳು ಮಾಡುವವರ ವಿರುದ್ಧ ಹಿಂದೂ ವರ್ತಕರ ಸಂಘವು ಕ್ರಮಕ್ಕೆ ಆಗ್ರಹಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply