Connect with us

UDUPI

ತುಳು ನಿಘಂಟು ತಜ್ಞ ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಇನ್ನಿಲ್ಲ

ಉಡುಪಿ ಜುಲೈ 18: ಹಿರಿಯ ಭಾಷಾ ವಿಜ್ಞಾನಿ ತುಳು ವಿಧ್ವಾಸ, ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಅವರು (85) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ತುಳು ಭಾಷೆಗೆ ಬೃಹತ್ ನಿಘಂಟು ರಚನೆಯಲ್ಲಿ ರಾಷ್ಟ್ರಕವಿ ಗೋವಿಂದ ಪೈ ತುಳು ನಿಘಂಟು ಯೋಜನೆಯ ಸಂಪಾದಕರಾಗಿದ್ದರು. ಈ ಯೋಜನೆಯಲ್ಲಿ ಆರು ಸಂಪುಟಗಳ ( 3,440 ಪುಟ, ಒಂದು ಲಕ್ಷ ಶಬ್ಧ) ತುಳು ನಿಘಂಟು ಹೊರತಂದಿದ್ದರು. ಭಾಷೆ, ಜಾನಪದ, ಸಂಸ್ಕೃತಿ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದ ಯು. ಪಿ ಉಪಾಧ್ಯಾಯರು , ತಮ್ಮ ಪತ್ನಿ ದಿ. ಡಾ. ಸುಶೀಲಾ ಉಪಾಧ್ಯಾಯ ಅವರೊಂದಿಗೆ ಸೇರಿ ಭಾಷೆ, ಜಾನಪದ ಸಂಸ್ಕೃತಿಯ ಕುರಿತಾಗಿ ಬಹಳಷ್ಟು ಸಂಶೋಧನೆ ನಡೆಸಿದ್ದಾರೆ. ಭಾಷಾ ಸಂಶೋಧನೆಯ ಕುರಿತಾಗಿ ವಿಶೇಷ ಆಸಕ್ತಿ ಹೊಂದಿದ್ದ ಉಪಾಧ್ಯಾಯರು ಆಫ್ರಿಕಾ ದೇಶಗಳಿಗೆ ತೆರಳಿ ಜಾನಪದ ಭಾಷೆಗಳ ಕುರಿತು ಅಧ್ಯಯನ ನಡೆಸಿದ್ದರು.
.

Facebook Comments

comments