ಲಕ್ನೋ, ಮಾರ್ಚ್ 17: ಉತ್ತರ ಪ್ರದೇಶದ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) 19 ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿ ಹರಿಶ್ ಅಲಿ ಅವರನ್ನು ಬಂಧಿಸಿದೆ. ಆರೋಪಿ ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ISIS ಆನ್ಲೈನ್ ಮಾಡ್ಯೂಲ್ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಮೊರಾದಾಬಾದ್ನಲ್ಲಿ ಅರೆಸ್ಟ್ ಆಗಿದ್ದಾರೆ.

ಎರಡನೇ ವರ್ಷದ ಬಿಡಿಎಸ್ ವಿದ್ಯಾರ್ಥಿ ಹರಿಶ್ ಅಲಿ ಸಾಮಾಜಿಕ ಮಾಧ್ಯಮಗಳಾದ ಇನ್ಸ್ಟಾಗ್ರಾಮ್ ಮತ್ತು ಎನ್ಕ್ರಿಪ್ಟ್ ಮಾಡಲಾದ ಅಪ್ಲಿಕೇಶನ್ಗಳಾದ ಡಿಸ್ಕಾರ್ಡ್ ಮೂಲಕ ಐಸಿಸ್ ನಿರ್ವಾಹಕರೊಂದಿಗೆ ಸಂಪರ್ಕ ಹೊಂದುತ್ತಿದ್ದಾನೆ. ಈ ಮೂಲಕ, ಆರೋಪಿ ಸಮಾನ ಮನಸ್ಕ ವ್ಯಕ್ತಿಗಳನ್ನು ಆಯ್ಕೆಮಾಡಿ ಐಸಿಸ್ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿದ್ದನು.
ತಂತ್ರಜ್ಞಾನ ಪರಿಶೀಲನೆಯಿಂದ, ಆರೋಪಿ ತನ್ನ ಗುರುತನ್ನು ಮರೆಮಾಚಿ, ಹಲವು ಆನ್ಲೈನ್ ಗುಂಪುಗಳನ್ನು ರಚಿಸಿದ್ದು, ವರ್ಚುವಲ್ ಖಾಸಗಿ ನೆಟ್ವರ್ಕ್ (VPN) ಮೂಲಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಇಂತಹ ಗುಂಪುಗಳು ಐಸಿಸ್ ಸಂದೇಶಗಳನ್ನು ಹಂಚಲು ಮತ್ತು ಹೊಸ ಸದಸ್ಯರನ್ನು ನೇಮಿಸಲು ಕಾರ್ಯನಿರ್ವಹಿಸುತ್ತಿವೆ. ಲಕ್ನೋ ಎಟಿಎಸ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆ ಮತ್ತು ಬಿಎನ್ಎಸ್ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.