Connect with us

LATEST NEWS

ಅನ್ ಲಾಕ್ ಆದ ಉಡುಪಿ ಜಿಲ್ಲೆ – ಸಹಜ ಸ್ಥಿತಿಯತ್ತ ಜನಜೀವನ

ಉಡುಪಿ ಜೂನ್ 22: ಕೊರೊನಾದ ಎರಡನೇ ಅಲೆಯಲ್ಲಿ 50ಕ್ಕೂ ಹೆಚ್ಚು ದಿನಗಳು ಲಾಕ್ ಡೌನ್ ಆಗಿದ್ದ ಉಡುಪಿ ಜಿಲ್ಲೆಯ ಕೊರೊನಾ ಪ್ರಕರಣ ಕಡಿಮೆಯಾದ ಹಿನ್ನಲೆಯಲ್ಲಿ ಇಂದು ಬಾಗಶಃ ಅನ್ಲಾಕ್ ಆಗಿದೆ.


ಕೊರೊನಾ ಪಾಸಿಟಿವಿ ರೇಟ್ ಕಡಿಮೆ ಇರುವ ಹಿನ್ನಲೆ ರಾಜ್ಯ ಸರಕಾರ ನಿನ್ನೆ ಉಡುಪಿ ಜಿಲ್ಲೆಯಲ್ಲಿ ಬಾಗಶಃ ಅನ್ಲಾಕ್ ಗೆ ಅವಕಾಶ ನೀಡಿತ್ತು, ಈ ಹಿನ್ನಲೆ ಇಂದು ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಅಂಗಡಿಗಳು ತೆರೆದಿದ್ದು, ವ್ಯಾಪಾರ ವಹಿವಾಟು ಆರಂಭಿಸಿವೆ. ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಬಸ್ ಸಂಚಾರಕ್ಕೆ ರಾಜ್ಯ ಸರಕಾರ ಅವಕಾಶ ನೀಡಿದ್ದರೂ ಉಡುಪಿ -ಕುಂದಾಪುರ ನಡುವೆ ಇಂದು ಕೇವಲ 4 ಖಾಸಗಿ ಬಸ್ ಗಳ ಸಂಚಾರ ಆರಂಭಿಸಿದೆ. ಇತರ ಸಿಟಿ ಬಸ್ ಹಾಗೂ ಸರ್ವಿಸ್ ಬಸ್ ಗಳು ಇನ್ನು ರೋಡಿಗೆ ಇಳಿದಿಲ್ಲ.


ಎಲ್ಲಾ ಅಂಗಡಿಗಳಿಗೂ ಸಂಜೆ 5 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶವಿದ್ದು, ಅಂಗಡಿಗಳಲ್ಲಿ ಸಾಮಾಜಿಕ ಅಂತರ ಪಾಲನೆ ಕುರಿತು ಅಂಗಡಿ ಮಾಲಿಕರು ಕ್ರಮ ಕೈಗೊಳ್ಳುತ್ತಿದ್ದಾರೆ. ಸಂಜೆ 5 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಹಿನ್ನಲೆ ನಗರದಲ್ಲಿ ನಿಯಮಿತ ಜನಸಂಚಾರ ಇದ್ದು, ಬಸ್ ಸಂಚಾರ ಇಲ್ಲದೆ ಹಿನ್ನಲೆ ಸಂಚಾರಕ್ಕೆ ತೊಂದರೆಯಾಗಿದ್ದು, ಉಡುಪಿ ಮಂಗಳೂರು ನಡುವೆ ಬಸ್ ಸಂಚಾರ ಇಲ್ಲದ ಕಾರಣ ಕೆಲಸಕ್ಕೆ ತೆರಳುವವರಿಗೆ ತೊಂದರೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಚಾಲ್ತಿಯಲ್ಲಿದ್ದು, ಉಡುಪಿ ಕುಂದಾಪುರ, ಕಾರ್ಕಳ, ಅಗುಂಬೆ ಮತ್ತು ರಾಜ್ಯ ಇತರೆಡೆಗಳಿಗೆ ಕೆ.ಎಸ್.ಆರ್.ಟಿ.ಸಿ ಸಂಚಾರ ಆರಂಭಿಸಿದೆ.

Advertisement
Click to comment

You must be logged in to post a comment Login

Leave a Reply