Connect with us

    LATEST NEWS

    ಅನ್ಲಾಕ್ 5.0 ಮಾರ್ಗಸೂಚಿ ಬಿಡುಗಡೆ … ಬಹುತೇಕ ಅನ್ಲಾಕ್ ಆದ ದೇಶ….!!

    ನವದೆಹಲಿ ಸೆಪ್ಟೆಂಬರ್ 30: ದೇಶದಲ್ಲಿ ನಾಳೆಯಿಂದ ಅನ್ಲಾಕ್ 5 ನೇ ಹಂತ ಪ್ರಾರಂಭವಾಗಲಿದೆ. ಈ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಮಾರ್ಗದರ್ಶಿ ಬಿಡುಗಡೆ ಮಾಡಿದ್ದು, ಇದರೊಂದಿಗೆ ದೇಶ ಬಹುತೇಕ ಅನ್ಲಾಕ್ ಆದಂತಾಗಿದೆ.


    ಈಗಾಗಲೇ ದೇಶದಲ್ಲಿ ಕೊರೊನಾ ವಿಶ್ವದ ಬೇರೆ ರಾಷ್ಟ್ರಗಳಿಗಿಂತಲೂ ವೇಗವಾಗಿ ಹರಡುತ್ತಿದೆ. ಈ ನಡುವೆ ಕೇಂದ್ರ ಅನ್ಲಾಕ್ 5.0 ಘೋಷಣೆ ಮಾಡಿದೆ. ಆರ್ಥಿಕತೆ ದೃಷ್ಟಿಯಿಂದ ಹೆಚ್ಚಿನ ಚಟುವಟಿಕೆಗಳು ಪ್ರಾರಂಭವಾಗುವುದು ಅನಿವಾರ್ಯ ಎಂದು ಹೇಳಿರುವ ಕೇಂದ್ರ ಸರ್ಕಾರ ಅನ್​ಲಾಕ್​-5ನೇ ಹಂತದಲ್ಲಿ , ಬಹುಜನರ ನಿರೀಕ್ಷೆಯಂತೆ ಸಿನಿಮಾ ಥಿಯೇಟರ್​ಗಳು, ಮಲ್ಟಿಪ್ಲೆಕ್ಸ್​ಗಳನ್ನು ತೆರೆಯಲು ಅನುಮತಿ ನೀಡಿದೆ.

    ಅನ್​ಲಾಕ್​-5ರ ಮಾರ್ಗಸೂಚಿ ಈ ಕೆಳಗಿನಂತೆ ಇದೆ.

    1. ಸಿನಿಮಾ ಹಾಲ್​ಗಳು, ಥಿಯೇಟರ್​ಗಳು, ಮಲ್ಟಿಪ್ಲೆಕ್ಸ್​ಗಳನ್ನು ಪ್ರಾರಂಭಿಸಬಹುದು. ಆದರೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಇರುವುದು ಕಡ್ಡಾಯ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಶೀಘ್ರವೇ ಎಸ್​ಒಪಿ ಬಿಡುಗಡೆಯಾಗಲಿದೆ.

    2. ಬ್ಯುಸಿನೆಸ್​ ಟು ಬ್ಯುಸಿನೆಸ್​(ಬಿ2ಬಿ-ಎರಡು ವ್ಯವಹಾರಗಳ ಮಧ್ಯೆ ನಡೆಯುವ ಉತ್ಪನ್ನಗಳ ವಹಿವಾಟು) ಎಕ್ಸಿಬಿಷನ್​ಗಳನ್ನು ಪ್ರಾರಂಭಿಸಬಹುದು. ಇದಕ್ಕೆ ಸಂಬಂಧಪಟ್ಟ ಎಸ್​ಒಪಿಯನ್ನು ವಾಣಿಜ್ಯ ಇಲಾಖೆ ಶೀಘ್ರವೇ ಬಿಡುಗಡೆ ಮಾಡುತ್ತದೆ.

    3. ಕ್ರೀಡಾಪಟುಗಳ ತರಬೇತಿಗಾಗಿ ಸ್ವಿಮ್ಮಿಂಗ್​ ಪೂಲ್​​ಗಳನ್ನು ಬಳಕೆ ಮಾಡಬಹುದಾಗಿದೆ. ಇದರ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್​ಒಪಿ)ಯನ್ನು ಕ್ರೀಡಾ ಸಚಿವಾಲಯ ನೀಡಲಿದೆ.

    4. ಮನರಂಜನಾ ಉದ್ಯಾನಗಳು​ ಮತ್ತು ಅದನ್ನು ಹೋಲುವ ಎಲ್ಲ ಸ್ಥಳಗಳನ್ನೂ ತೆರೆಯಲು ಅನುಮತಿ ನೀಡಲಾಗಿದೆ. ಎಸ್​ಒಪಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

    ಹಾಗೇ ಶಾಲೆಗಳು, ಕಾಲೇಜು, ಶೈಕ್ಷಣಿಕ, ಕೋಚಿಂಗ್​ ಸಂಸ್ಥೆಗಳನ್ನು ಪ್ರಾರಂಭಿಸುವ ಬಗ್ಗೆಯೂ ಅನ್​ಲಾಕ್​-5ರಲ್ಲಿ ಉಲ್ಲೇಖಿಸಲಾಗಿದೆ. ಶಾಲಾ-ಕಾಲೇಜುಗಳ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದರ ನಿರ್ಣಯ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಆಯಾ ಸರ್ಕಾರಗಳ ಶಿಕ್ಷಣ ಇಲಾಖೆಗಳು ಸೂಕ್ತ ಎಸ್​ಒಪಿ ತಯಾರಿಸಿ, ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶಾಲಾ-ಕಾಲೇಜುಗಳ ಪ್ರಾರಂಭ ಮಾಡಬಹುದು ಎಂದು ಹೇಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply