Connect with us

  DAKSHINA KANNADA

  ಜೆಬಿಎಫ್ ಉದ್ಯೋಗಿಗಳಿಗೆ ಗೇಲ್-ಇಂಡಿಯಾದಲ್ಲಿ ಶೀಘ್ರದಲ್ಲೇ ಖಾಯಂ ಉದ್ಯೋಗ: ಕೇಂದ್ರ ಪೆಟ್ರೋಲಿಯಂ ಸಚಿವ ಭರವಸೆ

  ನವದೆಹಲಿ :  ನವದೆಹಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವರಾದ  ಹರ್ದೀಪ್ ಸಿಂಗ್ ಪೂರಿಯವರನ್ನು ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಭೇಟಿಯಾದರು.

  ಮಂಗಳೂರಿನ ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜೆಬಿಎಫ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದವರಿಗೆ ನೇರವಾಗಿ ಖಾಯಂ ಉದ್ಯೋಗ ನೀಡುವಂತೆ ಸಚಿವರಾದ  ಹರ್ದೀಪ್ ಸಿಂಗ್ ಪೂರಿ ಅವರಿಗೆ  ಮನವಿ ಸಲ್ಲಿಸಿ ಜೆಬಿಎಫ್ ಉದ್ಯೋಗಿಗಳ ಬೇಡಿಕೆಯನ್ನು ಮಾನ್ಯ ಸಚಿವರಿಗೆ ವಿವರವಾಗಿ ಮನವರಿಕೆ ಮಾಡಲಾಯಿತು. ಇದಕ್ಕೆ ಸ್ಪಂದಿಸಿದ ಮಾನ್ಯ ಸಚಿವರು ಶೀಘ್ರದಲ್ಲಿಯೇ ಸಕರಾತ್ಮಕ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮುಲ್ಕಿ-ಮೂಡಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್ ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್  ಉಪಸ್ಥಿತರಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply