ಬ್ರೆಕಿಂಗ್ ನ್ಯೂಸ್ – ಭಾರತೀಯ ಸೇನೆಯಿಂದ ಮೂರನೇ ಸರ್ಜಿಕಲ್ ಸ್ಟ್ರೈಕ್

ಮಂಗಳೂರು ಮಾರ್ಚ್ 9: ಭಾರತೀಯ ಸೇನೆ ಈಗಾಗಲೇ ಮೂರು ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದು, ಮೂರನೇ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸುಳಿವು ನೀಡಿದ್ದಾರೆ. ಮಾಹಿತಿ ನೀಡಲು ನಿರಾಕರಿಸಿದರು.

ಉಡುಪಿ ಚಿಕ್ಕಮಗಳೂರು ದಕ್ಷಿಣಕನ್ನಡ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಶಕ್ತಿ ಕೇಂದ್ರ ಸಮಾವೇಶದಲ್ಲಿ ಮಾತನಾಡಿದ ಅವರು ಭಾರತೀಯ ಸೇನೆ ಈಗಾಗಲೇ ಮೂರು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಹೇಳಿದ ಅವರು ಉರಿ, ಬಾಲಕೋಟ್ ಹೊರತು ಪಡಿಸಿ 3ನೇ ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ ಆದರೆ ಅದರ ಮಾಹಿತಿ ನೀಡುವುದಿಲ್ಲ ಎಂದು ಹೇಳುವ ಮೂಲಕ ಮೂರನೇ ಸರ್ಜಿಕಲ್ ಸ್ಟ್ರೈಕ್ ಸುಳಿವಿತ್ತಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ ರಾಜನಾಥ್ ಸಿಂಗ್ ಕರ್ನಾಟಕದಲ್ಲಿ ಕಿಚಡಿ ಸರ್ಕಾರ ಆಡಳಿತ ನಡೆಸುತ್ತಿದ್ದು, ರಾಜ್ಯ ಸರಕಾರ ರೈತರ ಸಾಲಮನ್ನಾ ಘೋಷಣೆ ಮಾಡಿದೆ, ಆದರೆ ಅದು ರೈತರಿಗೆ ತಲುಪಿದೆಯೇ ಅಂತ ಪ್ರಶ್ನೆ ಮಾಡಿದರು. ಹೇಳೋದೊಂದು ಮಾಡೋದೊಂದು ಆಡಳಿತ ಆಗಬಾರದು ಎಂದು ಹೇಳಿದರು.

ಕಾಶ್ಮೀರದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಂತೆ ಎಲ್ಲಾ‌ ರಾಜ್ಯಗಳಿಗೂ ಸೂಚನೆ ನೀಡಲಾಗಿದ್ದು, ಕಾಶ್ಮೀರದ ವಿದ್ಯಾರ್ಥಿಗಳಿಗೆ ತೊಂದರೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಅಲ್ಲದೆ ಕಾಶ್ಮೀರಿ ವಿದ್ಯಾರ್ಥಿಗಳ ರಕ್ಷಣೆ ಬಿಜೆಪಿ ಕಾರ್ಯಕರ್ತರ ಹೊಣೆ ಎಂದು ತಿಳಿಸಿದರು.

ಇತ್ತೀಚೆಗೆ ನಡೆದ ಇಸ್ಲಾಮಿಕ್ ರಾಷ್ಟ್ರಗಳ ಸಮ್ಮೇಳನಕ್ಕೆ ಭಾರತಕ್ಕೆ ಆಹ್ವಾನ ಇರಲಿಲ್ಲ ಪಾಕಿಸ್ಥಾನದ ವಿರೋಧ ಇದ್ದರೂ, ನಮ್ಮ ವಿದೇಶಾಂಗ ಸಚಿವರು ಹೋಗಿದ್ದರು. ಸಮ್ಮೇಳನದಲ್ಲಿ ಪಾಕ್ ವಿರುದ್ಧ ನಿರ್ಣಯ ತಗೊಳ್ಳುವಂತೆ ಮಾಡಿದ್ದು ಸಣ್ಣ ಸಾಧನೆಯಲ್ಲ ನಮ್ಮ ವಿದೇಶಾಂಗ ಸಚಿವರು ಭಾರತಕ್ಕೆ ಮುಸ್ಲಿಂ ರಾಷ್ಟ್ರಗಳ ಬೆಂಬಲ ಪಡೆಯುವಂತೆ ಮಾಡಿದ್ದರು ಎಂದು ಹೇಳಿದರು.