Connect with us

MANGALORE

ಉಳ್ಳಾಲ ವಾಟ್ಸಪ್ ಸ್ಟೇಟಸ್ ಶೂಟೌಟ್ ಪ್ರಕರಣ 12 ಮಂದಿ ಆರೆಸ್ಟ್

ಉಳ್ಳಾಲ ವಾಟ್ಸಪ್ ಸ್ಟೇಟಸ್ ಶೂಟೌಟ್ ಪ್ರಕರಣ 12 ಮಂದಿ ಆರೆಸ್ಟ್

ಮಂಗಳೂರು ಸೆಪ್ಟೆಂಬರ್ 23: ಮಂಗಳೂರಿನ ಉಳ್ಳಾಲದಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ತಂಡಗಳಿಗೆ ಸೇರಿದ 12 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮೊಹ್ಮದ್ ಅರ್ಶಾದ್, ನಿಜಾಮುದ್ದೀನ್, ತೌಫಿಕ್ ಶೇಖ್, ಫಹಾದ್, ಅಫ್ವಾನ್, ಮೊಹಮ್ಮದ್, ಮಹಮ್ಮದ್ ವಾಸಿಂ, ಅಬ್ದುಲ್ ರಹಮತ್ತುಲ್ಲ, ಹರ್ಷಾದ್, ಮುಝಾಮಿಲ್, ರೈಫಾನ್, ಮೊಹ್ಮದ್ ಸಿಯಾಬ್ ಎಂದು ಗುರುತಿಸಲಾಗಿದೆ.

ನಿನ್ನೆ ತಡ ರಾತ್ರಿ ವಾಟ್ಸಾಪ್ ಸ್ಟೇಟಸ್ ವಿಚಾರದಲ್ಲಿ ಎರಡು ತಂಡಗಳ ನಡುವೆ ಗಲಾಟೆ ನಡೆಸಿದ್ದು, ಈ ಮಾರಾಮಾರಿ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಮೇಲೆ ಒಂದು ತಂಡ ಹಲ್ಲೆ ನಡೆಸಿದೆ. ಹಲ್ಲೆ ಸಂದರ್ಭದಲ್ಲಿ ಸುಹೈಲ್ ಕಂದಕ್ ತಮ್ಮಲ್ಲಿದ್ದ ರಿವಾಲ್ವರಿಂದ ಇನ್ನೊಂದು ತಂಡ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒರ್ವ ಗಾಯಗೊಂಡಿದ್ದಾನೆ.

ಮಾರಮಾರಿಯಲ್ಲಿ ಗಾಯಗೊಂಡಿದ್ದ ಸುಹೈಲ್ ಕಂದಕ್ ಮತ್ತು ಇರ್ಶಾದ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸುಹೈಲ್ ಮತ್ತು ಇರ್ಶಾದ್ ನಿಂದ ಉಳ್ಳಾಲ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

ಘಟನೆ ನಡೆದ ಕೂಡಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಎರಡೂ ತಂಡಗಳಿಂದ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Facebook Comments

comments