Connect with us

    LATEST NEWS

    ಉಳ್ಳಾಲ – ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ಯುವತಿಯರ ರಕ್ಷಣೆ – ನಾಲ್ವರ ಬಂಧನ

    ಉಳ್ಳಾಲ ಡಿಸೆಂಬರ್ 07: ಬಾಡಿಗೆ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಉಳ್ಳಾಲ ಪೊಲೀಸರು ದಾಳಿ ನಡೆಸಿ ದಂಪತಿ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.


    ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಬಾಡಿಗೆ ಮನೆಯೊಂದರಲ್ಲಿ ಈ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಬೀರಿ ಬಾಡಿಗೆ ಮನೆ ನಿವಾಸಿ ಮೊಹಮ್ಮದ್ ಇಕ್ಬಾಲ್, ಆತನ ಪತ್ನಿ ಅಲಿಮಮ್ಮ, ಉಳ್ಳಾಲ ನಿವಾಸಿ ಶರ್ಫುದ್ದೀನ್,ಇರ್ಶಾದ್ ಅಡ್ಯನಡ್ಕ ಅವರನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    ಮೊಹಮ್ಮದ್ ಇಕ್ಬಾಲ್ ಈ ಪ್ರಕರಣದ ಮುಖ್ಯ ಆರೋಪಿ ಆಗಿದ್ದು ಈತ ಈ ಹಿಂದೆ ಪಿಲಾರು,ಕಾಪಿಕಾಡು ಪ್ರದೇಶಗಳಲ್ಲೂ ಬಾಡಿಗೆ ಮನೆ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಪೊಲೀಸರು ನಿನ್ನೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದು ನೊಂದ ಯುವತಿಯರನ್ನ ರಕ್ಷಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply