Connect with us

    LATEST NEWS

    ಪಕ್ಕದ ಉಳ್ಳಾಲ ಇನ್ನು ಮುಂದೆ ತಾಲೂಕು ಕೇಂದ್ರ

    ಪಕ್ಕದ ಉಳ್ಳಾಲ ಇನ್ನು ಮುಂದೆ ತಾಲೂಕು ಕೇಂದ್ರ

    ಮಂಗಳೂರು, ಫೆಬ್ರವರಿ 28 : ಫೆಬ್ರವರಿಯ ಕೊನೆಯ ದಿನ ರಾಜ್ಯ ಸರ್ಕಾರ ಉಳ್ಳಾಲದ ಜನರಿಗೆ ಸಿಹಿ ಸುದ್ದಿ ನೀಡಿದೆ. ಏಕಾಏಕಿ ಉಳ್ಳಾಲವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದೆ.

    ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಉಳ್ಳಾಲ ಇನ್ಮುಂದೆ ತಾಲೂಕು ಕೇಂದ್ರವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ರಾಜ್ಯ ಸರ್ಕಾರ ‌ಮಹತ್ವದ ಆದೇಶ ಹೊರಡಿಸಿದೆ.

    ಮಂಗಳೂರು ನಗರದ ಕೇಂದ್ರ ಭಾಗದಿಂದ ಕೇವಲ 6 ಕಿಲೋ ಮೀಟರ್ ದೂರದಲ್ಲಿರುವ ಉಳ್ಳಾಲವನ್ನು ಏಕಾಎಕಿ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

    ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಉಳ್ಳಾಲವನ್ನು ಸರ್ಕಾರ ತಾಲೂಕು ಆಗಿ ಘೋಷಣೆ ಮಾಡಿದೆ.

    ಸಚಿವ ಯು.ಟಿ.ಖಾದರ್ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಇನ್ನು ಮುಂದೆ ಪ್ರತ್ಯೇಕ ತಾಲೂಕು ಕಚೇರಿ, ತಹಶೀಲ್ದಾರ್ ನೇಮಕದ ಲಸಗಳು ನಡೆಯಬೇಕಿದೆ. ಉಳ್ಳಾಲದ ಜೊತೆ ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಮುಲ್ಕಿಯನ್ನು ತಾಲೂಕನ್ನಾಗಿ ಸರ್ಕಾರ ಘೋಷಣೆ ಮಾಡಿ ಆದೆಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರೀಯಿಸಿರುವ ಉಳ್ಳಾಲವನ್ನು ಪ್ರತಿನಿಧಿಸುತ್ತಿರುವ ಸಚಿವ ಯು. ಟಿ . ಖಾದರ್ ಅವರು ಉಳ್ಳಾಲ ತಾಲೂಕಾಗಿ ಘೋಷಣೆಯಾದ ಕಾರಣದಿಂದ ಇನ್ನು ಮುಂದೆ ಇಲ್ಲಿನ ನಾಗರಿಕರು ಮಂಗಳೂರಿಗೆ ಆಡಳಿತಾತ್ಮಕ ಕೆಲಸಕ್ಕೆ ಅಲೆಯುವುದು ತಪ್ಪಲಿದೆ.ರಾಜ್ಯದಲ್ಲಿ ಪರಿಣಾಮಕಾರಿ ಸಮರ್ಥ ಆಡಳಿತ ನೀಡುವ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಹೊಸ ತಾಲೂಕುಗಳ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಆದರೆ ಇದರ ಹಿಂದೆ ರಾಜಕೀಯದ ವಾಸನೆ ಕೂಡ ಇದೆ. ಈ ಹಿಂದೆ ಉಳ್ಳಾಲವನ್ನು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ತಂದು ಗ್ರೇಟರ್ ಮಂಗಳೂರು ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಇದಕ್ಕೆ ಸ್ಥಳಿಯ ಶಾಸಕರಾದ ಯು,ಟಿ ಖಾದರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಉಳ್ಳಾಲವನ್ನು ಹಾಗೇ ಇಟ್ಟಿದ್ದರು. ಪಾಲಿಕೆಗೆ ಸೇರ್ಪಡೆಯಾದರೇ ರಾಜಕೀಯವಾಗಿ ತನಗೆ ಹಿನ್ನಡೆಯಾಗುದರೊಂದಿಗೆ ತನ್ನ  ಮತಗಳು ವಿಭಜನೆಯಾಗಬಹುದು ಎಂಬ ಭೀತಿಯಲ್ಲಿದ್ದರು. ಉಳ್ಳಾಲದ ಸ್ಥಳೀಯಾಡಳಿತದ ಮೇಲಿನ ಹಿಡಿತ ಪಾಲಿಕೆಯಲ್ಲಿ ಉಳ್ಳಾಲ ಮಿಳಿತಗೊಂಡರೆ ಕೈತಪ್ಪ ಬಹುದು ಎಂಬ ಭೀತಿಯಿಂದ ಚಾಣಾಕ್ಷ ರೀತಿಯಲ್ಲಿ ತಮ್ಮ ದಾಳ ಉರುಳಿಸಿದ್ದಾರೆಎಂದು ವಿಶ್ಲೇಷಿಸಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply