Connect with us

MANGALORE

ಕೊರೊನಾ ಹೆಚ್ಚಳ ಹಿನ್ನಲೆ ಉಳ್ಳಾಲದಲ್ಲಿ ರ್‍ಯಾಂಡಮ್ ಟೆಸ್ಟ್ ಪ್ರಾರಂಭ

ಮಂಗಳೂರು ಜೂನ್ 30: ಮಂಗಳೂರಿನ ಉಳ್ಳಾಲ ವ್ಯಾಪ್ತಿಯಲ್ಲಿ ಕೊರೋನಾ ಪ್ರಕರಣ ಹೆಚ್ಚಳ ಹಿನ್ನೆಲೆ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ರ್‍ಯಾಂಡಮ್ ಟೆಸ್ಟ್ ಆರಂಭಿಸಲಾಗಿದೆ.


ಮಾಜಿ ಸಚಿವ ಉಳ್ಳಾಲ ಶಾಸಕ ಯು.ಟಿ.ಖಾದರ್ ಸೂಚನೆ ಹಿನ್ನೆಲೆ ಈ ರ್‍ಯಾಂಡಮ್ ಟೆಸ್ಟ್ ನಡೆಸಲಾಗುತ್ತಿದೆ. ಉಳ್ಳಾಲ ನಗರಸಭೆಯ ಬಳಿಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಮುಖ್ಯವಾಗಿ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನಾಗರಿಕರಿಗೆ ಪರೀಕ್ಷೆ ಮಾಡಿಸಲಾಗುತ್ತಿದೆ. ಇಂದು ಸಂಜೆ 5 ಗಂಟೆಯವರೆಗೆ ಈ ಪರೀಕ್ಷೆ ನಡೆಯಲಿದೆ.

ಉಳ್ಳಾಲ ಮತ್ತು ಪೆರ್ಮನ್ನೂರು ಗ್ರಾಮ ವ್ಯಾಪ್ತಿಯ ನಾಗರಿಕರಿಗೆ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.

Facebook Comments

comments