Connect with us

    LATEST NEWS

    ಉಕ್ರೇನ್ ನ ಪ್ರಮುಖ ನಗರ ಖೇರ್ಸನ್ ರಷ್ಯಾ ವಶಕ್ಕೆ…!!

    ಉಕ್ರೇನ್ : ಉಕ್ರೇನ್ ಮೇಲೆ ಯುದ್ದ ಸಾರಿರುವ ರಷ್ಯಾ ಇದೀಗ ಮೊದಲ ಬಾರಿಗೆ ಪ್ರಮುಖ ನಗರವನ್ನು ತನ್ನ ವಶಕ್ಕೆ ಪಡೆದಿದೆ. ರಷ್ಯಾದ ಭೀಕರ ದಾಳಿ ಹಿನ್ನೆಲೆಯಲ್ಲಿ ನಾಗರೀಕರ ಜೀವ ಉಳಿಸಲು ಖೇರ್ಸನ್ ನಲ್ಲಿ ಉಕ್ರೇನ್ ಸೇನೆ ರಷ್ಯಾಗೆ ಶರಣಾಗತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


    ರಷ್ಯಾ ಇಂದು ಮುಂಜಾನೆಯೇ ಉಕ್ರೇನ್ ಮೇಲೆ ರಾಕೆಟ್​ ದಾಳಿ, ಕ್ಷಿಪಣಿ ದಾಳಿ ಮಾಡಿ ಹಲವು ಮಿಲಿಟರಿ ಕಟ್ಟಡಗಳನ್ನು ಧ್ವಂಸ ಮಾಡಿದೆ. ಹೀಗಾಗಿ ಸೈನಿಕರು ನಾಗರಿಕರ ಜೀವ ಉಳಿಸಲು ಶರಣಾಗಿದ್ದಾರೆಂದು ತಿಳಿದುಬಂದಿದೆ. ರಷ್ಯಾ ಖೆರ್ಸನ್​​ ನಗರ , ಕೀವ್​​​, ಕಾರ್ಖೀವ್​​​​​​ ಆವರಿಸಿಕೊಂಡಿದ್ದು, ಖೇರ್ಸನ್​​​​​​ ನಗರವನ್ನು ಸುತ್ತುವರೆದಿದೆ ಎಂದು ಖೇರ್ಸನ್​​​ ರಾಜ್ಯಪಾಲರಿಂದಲೇ ಅಧಿಕೃತ ಮಾಹಿತಿ ಬಂದಿದೆ.


    ಕೀವ್, ಕೀವ್ ಒಬ್ಲಾಸ್ಟ್, ಮೈಕೊಲೈವ್, ವೊಲಿನ್ ಒಬ್ಲಾಸ್ಟ್, ಝೈಟೊಮಿರ್, ಚೆರ್ನಿಹಿವ್, ಚೆರ್ನಿಹಿವ್ ಒಬ್ಲಾಸ್ಟ್, ಇವಾನೊ-ಫ್ರಾಂಕಿವ್ಸ್ಕ್, ಎಲ್ವಿವ್, ಚೆರ್ಕಾಸಿ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದ್ದು, ಉಕ್ರೇನ್ ನಾಗರಿಕರು ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply