ಶಿರ್ವಾ ಮಾರ್ಚ್ 02: ಮೊಬೈಲ್ ನಲ್ಲಿ ಪರಿಚಯಲಾದ ವಿದೇಶದಲ್ಲಿರುವ ವ್ಯಕ್ತಿಯೊಬ್ಬನ ಮಾತು ನಂಬಿ ಆತ ಕಳುಹಿಸಿದ ಗಿಪ್ಟ್ ಕೊರಿಯರ್ ವಂಚನೆಯಲ್ಲಿ ಉಡುಪಿಯ ಮಹಿಳೆಯೊಬ್ಬರು ಬರೋಬ್ಬರಿ 14 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.

ಮಹಿಳೆಯೊಬ್ಬರಿಗೆ ಮೊಬಾಲ್ ನಲ್ಲಿ ವಿದೇಶದಲ್ಲಿದ್ದ ವ್ಯಕ್ತಿಯೊಬ್ಬರು ಪರಿಚಯವಾಗಿದ್ದು. ಆತನ ತನ್ನ ಹೆಸರಿನಲ್ಲಿ ಗಿಪ್ಟ್ ಕೋರಿಯರ್ ಮಾಡಿರುತ್ತೇನೆ ಎಂದು ದಿನಾಂಕ 22/02/2026 ರಂದು ತಿಳಿಸಿ ಅದರ ಛಾಯಾಚಿತ್ರವನ್ನು ವಾಟ್ಸ್ ಆಪ್ನಲ್ಲಿ ಕಳುಹಿಸಿಕೊಟ್ಟಿದ್ದಾನೆ. ಬಳಿಕ . ದಿನಾಂಕ: 23/02/2026 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಹಿಳೆ ಕೆಲಸದಲ್ಲಿರುವ ಸಮಯದಲ್ಲಿ ಮೊಬೈಲ್ ಗೆ ಒಬ್ಬಾಕೆಯು ಕರೆ ಮಾಡಿ ನಿಮಗೆ ವಿದೇಶದಿಂದ ನಿಮ್ಮ ಹೆಸರಿನಲ್ಲಿ ಕೋರಿಯರ್ ಬಂದಿರುತ್ತದೆ ಈ ಕೋರಿಯರ್ ವಿಮಾನ ನಿಲ್ದಾಣದಿಂದ ಹೊರಗಡೆ ಬರಬೇಕಾದರೆ ನೀವು 49,700/- ಹಣವನ್ನು ಹಾಕುವಂತೆ ತಿಳಿಸಿದ್ದಾರೆ. ಮಹಿಳೆ ಅವರು ತಿಳಿಸಿದ ಐಡಿಬಿಐ ಬ್ಯಾಂಕ್ ದೆಹಲಿ ಖಾತೆ ಗೆ ದಿನಾಂಕ:23/02/2026 ರಂದು ಕೆನರ ಬ್ಯಾಂಕ್ ಉಡುಪಿ ಬ್ರಾಂಚ್ ಮುಖೇನ ಕಳುಹಿಸಿರುತ್ತಾರೆ. ಬಳಿಕ ಸ್ವಲ್ಪ ಸಮಯದ ಬಳಿಕ ಕೋರಿಯರ್ ಚೆಕ್ಕಿಂಗ್ ಆಗಲು ಇದೆ ಎಂದು ತಿಳಿಸಿದರು. ಈ ಕೋರಿಯರ್ನಲ್ಲಿ 30,000/- ನೊತ್ತದ ವಿದೇಶದ ಪೌಂಡ್ ಇದೆ ಈ ರೀತಿ ವಿದೇಶ ಹಣವನ್ನು ಕೋರಿಯರ್ನಲ್ಲಿ ಕಳುಹಿಸಿರುವುದು ಕಾನೂನು ಬಾಹಿರವಾಗಿರುತ್ತದೆ. ಇದಕ್ಕೆ ನೀವು ಕೂಡಲೇ 1,89,000/- ಹಣವನ್ನು ಹಾಕುವಂತೆ ತಿಳಿಸಿ ಮೂರು ಖಾತೆ ನಂಬ್ರ ನೀಡಿದ್ದು ಒಟ್ಟು 1,89,000/- ಹಣವನ್ನು ಕಳುಹಿಸಿರುವುದಾಗಿದೆ.
ಬಳಿಕ ಅದೇ ದಿನದಂದು ಸಂಜೆ ಆಕೆಯು ಕರೆ ಮಾಡಿ ಮನಿ ಎಕ್ಸ್ಚೇಂಜ್ ಮಾಡಲು ಹೆಚ್ಚುವರಿ ಹಣ ಕಳುಹಿಸುವಂತೆ ತಿಳಿಸಿದಳು. ಅದರಂತೆ ಕ್ರಮವಾಗಿ 62,500/- ರಂತೆ ಒಟ್ಟು 2,50,000/- ಹಣವನ್ನು ಕಳುಹಿಸಿಕೊಟ್ಟಿದ್ದು. ಬಳಿಕ ಆಕೆಯು ಕರೆ ಮಾಡಿ ಡೋಕ್ಯುಮೆಂಟೇಶನ್ ಮಾಡಲು ಹಣ ಕಳುಹಿಸುವಂತೆ ತಿಳಿಸಿದ್ದು ಹೀಗೆ ಹಲವು ಬಾರಿ ಒಟ್ಟು ದಿನಾಂಕ:23/02/2026 ರಿಂದ ದಿನಾಂಕ:27/02/2026 ರವರೆಗೆ ಒಟ್ಟು ಮೊತ್ತ 13,99,700/- ಹಣವನ್ನು ಆಕೆಯು ತಿಳಿಸಿದಂತೆ ಬೇರೆ ಬೇರೆ ಖಾತೆಗೆ ಹಣವನ್ನು ಕಳುಹಿಸಿಕೊಟ್ಟಿರುವುದಾಗಿದೆ.
ಬಳಿಕ ತಾನು ವಿದೇಶದಲ್ಲಿರುವ ಸ್ನೇಹಿತ ಮಿಲರ್ ಗೇರ್ ಹಾರ್ಡ್ ಈತನಿಗೆ ಕರೆ ಮಾಡಿ ವಿಚಾರಿಸಿದಾಗ ತಾನು ಕಳುಹಿಸಿದ ಕೋರಿಯರ್ನಲ್ಲಿ ವಿದೇಶದ 30,000/- ಪೌಂಡ್ ಹಣವನ್ನು ಕಳುಹಿಸಿರುವುದಾಗಿ ತಿಳಿಸಿರುತ್ತಾನೆ.ಈ ಕೋರಿಯರ್ನಲ್ಲಿ ಇದ್ದ ವಿದೇಶದ ಮೊತ್ತ ಭಾರತದ ಮೊತ್ತಕ್ಕೆ 37,00,000/- ಹಣ ಆಗುವುದಾಗಿ ಕರೆ ಮಾಡಿದ ಮಹಿಳೆಯು ತಿಳಿಸಿರುತ್ತಾಳೆ.ಇವರಿಬ್ಬರು ಕರೆ ಮಾಡಿ ತಿಳಿಸಿದ್ದರಿಂದ ಅವರ ಮಾತನ್ನು ನಂಬಿ ಒಟ್ಟು 13,99,700/- ಮೊತ್ತವನ್ನು ಅವರು ತಿಳಿಸಿದ ವಿವಿಧ ಖಾತೆಗೆ ಕಳುಹಿಸಿಕೊಟ್ಟಿದ್ದು ಆದರೆ ಅವರು ಕಳುಹಿಸಿದ ಕೋರಿಯರ್ ಕೂಡ ಬಂದಿರುವುದಿಲ್ಲ.
ಬಳಿಕ ತಾನು ಮೋಸ ಹೋಗಿರುವುದು ಗೊತ್ತಾದ ಹಿನ್ನಲೆ ಮಹಿಳೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2026 ಕಲಂ: 66(ಡಿ) ಐ ಟಿ ಕಾಯಿದೆ ಮತ್ತು ಕಲಂ: 316(2), 318(4) R/w 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲು ಮಾಡಿದ್ದಾರೆ.