Connect with us

    LATEST NEWS

    ವೃತ್ತಿಯಲ್ಲಿ ಶಿಕ್ಷಕರಲ್ಲದಿದ್ದರೂ ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿರುವ ಶಿವಣ್ಣ

    ಉಡುಪಿ : ಇವರು ವೃತ್ತಿಯಲ್ಲಿ ಶಿಕ್ಷಕರಲ್ಲ. ಆದರೆ ಅದೆಷ್ಟೋ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ . ಜಾತಿ ಮತ ಬೇಧವಿಲ್ಲದೆ ತನ್ನ ಪುಟ್ಟ ಅಂಗಡಿಯಲ್ಲಿ ಹಲವು ಮಕ್ಕಳಿಗೆ ಊಟ ವಸತಿಕೊಟ್ಟು ಬೆಳೆಸಿದ್ದಾರೆ. ಬಿಡುವಿನಲ್ಲಿ ಪಕ್ಕದ ಶಾಲಗೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಾರೆ.


    ಇವರ ಹೆಸರು ಶಿವಾನಂದ ಕಾಮತ್ ಉಡುಪಿ ಜಿಲ್ಲೆಯ ಶಿರ್ವದವರು. ಶಿರ್ವ ಚಿಕ್ಕ ಪ್ರದೇಶವಾದ್ರೂ ಅರಬ್ ದೇಶಗಳ ವ್ಯವಹಾರದ ಮಟ್ಟಿಗೆ ದೊಡ್ಡ ಹೆಸರು. ಇಲ್ಲಿ ಇರೋದು ಒಂದೇ ಸಾಲು ಪೇಟೆ ಇಲ್ಲಿ ಹೊಸ ಅಂಗಡಿ ಅಂತ ಬಟ್ಟೆ ಬರೆ ಹೊಲಿಗೆ ಸಾಮಾಗ್ರಿ ಸ್ಟೇಶನರಿ ಅಂಗಡಿ ಇದೆ. ಇದರ ಮಾಲಕರೇ ಈ ಶಿವಾನಂದ ಕಾಮತ್ ಎಲ್ರೂ ಶಿವಣ್ಣಾ ಅಂತಾನೇ ಕರೀತಾರೆ. ತಮಗಿದ್ದ ಒಬ್ಬ ಮಗ ಬೆಂಗಳೂರಿನಲ್ಲಿ ಉದ್ಯೋಗಿ ಆಗಿದ್ದಾನೆ. ಆದ್ರೆ ಈ ಶಿವಣ್ಣ ದಂಪತಿಗಳು ಅದೆಷ್ಟೋ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾದವರನ್ನು ಕರೆಸಿ ತಮ್ಮ ಮನೆಯಲ್ಲಿ ಉಚಿತ ಊಟ ವಸತಿ ನೀಡಿ ಶಿಕ್ಷಣ ನೀಡುತ್ತಾ ಬಂದಿದ್ದಾರೆ.

    ಬಿಡುವಿನ ಸಮಯದಲ್ಲಿ ಆ ಮಕ್ಕಳು ಇವರ ಅಂಗಡಿಯಲ್ಲಿ ಅವರದಾದ ಸೇವೆ ಮಾಡುತ್ತಾರೆ. ಅದು ಕಡ್ಡಾಯ ಏನಲ್ಲ. ಶಿವಣ್ಣ ಅವರ ಪತ್ನಿಯನ್ನು ಈ ಮಕ್ಕಳು ಅಮ್ಮ ಅಂತನೇ ಕರೀತಾರೆ. ಇವರಲ್ಲಿ ಕಲಿತ ಮಕ್ಕಳು ಕೆಲವರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಕೆಲವರು ಬೆಂಗಳೂರಿನಲ್ಲಿದ್ದಾರೆ . ಇನ್ನು ಕೆಲವರು ಇಲ್ಲೇ ಹೋಟೇಲು ಕ್ಯಾಂಟೀನು ನಡೆಸಿಕೊಂಡಿದ್ದಾರೆ. ಎಲ್ಲಾ ಜಾತಿ ಧರ್ಮದ ಶಿಕ್ಷಣ ವಂಚಿತ ಮಕ್ಕಳನ್ನು ಶಿವಣ್ಣ ದಂಪತಿ ಪ್ರೀತಿಯಿಂದ ಸಾಕಿ ಶಿಕ್ಷಣ ನೀಡಿ ಆದರ್ಶ ಪ್ರಾಯರಾಗಿದ್ದಾರೆ.

    ಇಷ್ಟೇ ಅಲ್ಲದೆ ಸದಾ ಸರಳ ಸ್ವಭಾವದ ಶಿವಣ್ಣ ಎಲ್ಲರಿಗೂ ಅಚ್ಚುಮೆಚ್ಚು. ತಾನೊಬ್ಬ ಶಿಕ್ಷಕನಾಗಬೇಕು ಎಂಬ ಆಸೆ ಇಟ್ಕೊಂಡಿದ್ರಂತೆ. ಆದ್ರೆ ಅದು ಆಗಿಲ್ಲ ಅನ್ನೋ ಕಾರಣದಿಂದ ತನ್ನ ಮನೆಯಲ್ಲಿಯೇ ಅದೆಷ್ಟೋ ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷಣ ನೀಡುತ್ತಿದ್ದಾರೆ. ಜೊತೆಗೆ ಬಿಡುವಿದ್ದಾಗ ಸ್ಥಳೀಯ ಹಿಂದೂ ಪ್ರಾಥಮಿಕ ಶಾಲೆಗೆ ಹೋಗಿ ಅಲ್ಲಿ ಮಕ್ಕಳಿಗೆ ಪಾಠ ಮಾಡ್ತಾರೆ ಭಜನೆ ಹಾಡ್ತಾರೆ ಅವರ ಜೊತೆ ಖುಷಿಯಾಗಿ ಬೆರೆತು ಸಂತೋಷ ಪಡ್ತಾರೆ ಈ ಕಾರಣದಿಂದ ಅವರನ್ನು ಮಕ್ಕಳು ಪ್ರೀತಿಯಿಂದ ಯಾವಾಗ ಬರ್ತೀರಿ ಸರ್ ಅಂತಾ ಕೇಳ್ತಾರಂತೆ. ಹೀಗೆ ತಮ್ಮ ಬದುಕಿನ ಗಳಿಕೆಯನ್ನು ಇತರರ ಏಳಿಗೆಗೆ ವಿನಿಯೋಗಿಸುವ ಈ ದಂಪತಿಗಳ ಶಿಕ್ಷಣ ಸೇವೆ ಮಾದರಿಯಾಗಿದೆ.


    ಇಂದಿನ ದಿನಗಳಲ್ಲಿ ಫೀಸ್ ಡೊನೇಶನ್ ಅಂತಾ ಮನೆ ಮಕ್ಕಳಿಗೆ ಶಿಕ್ಷಣ ಕೊಡೋಕೇ ಕಷ್ಟದ ಕಾಲ ಇದು. ಅದ್ರಲ್ಲೂ ಎಲ್ಲರೂ ಶಿಕ್ಷಣ ಪಡೀಬೇಕು ಅದಕ್ಕೆ ನಮ್ಮಿಂದಾದ ಸಹಾಯ ನಾವೆಲ್ಲರೂ ಮಾಡಬೇಕು ಅನ್ನೋ ಮನೋಭಾವ ತೋರ್ಪಡಿಸುವ ಶಿವಣ್ಣ ದಂಪತಿಗಳಿಗೆ ಒಂದು ವಿಶೇಷ ನಮಸ್ಕಾರ.

    Video:

    Share Information
    Advertisement
    Click to comment

    You must be logged in to post a comment Login

    Leave a Reply