Connect with us

    LATEST NEWS

    ಮಲ್ಪೆ: ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಯುವತಿಯ ರಕ್ಷಣೆ

    ಉಡುಪಿ, ಮಾರ್ಚ್ 02: ಸಮುದ್ರ ತೀರದಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಹುಡುಗಿಯನ್ನು ಲೈಫ್‌ಗಾರ್ಡ್‌ಗಳು ರಕ್ಷಿಸಿದ ಘಟನೆ ಉಡುಪಿ ಮಲ್ಪೆ ಬೀಚ್ ಪರಿಸರಲ್ಲಿ ನಡೆದಿದೆ.

    ಚಿತ್ರದುರ್ಗ ಮೂಲದ ಮಾನಗಿ ಗ್ರಾಮದ ಐಶ್ವರ್ಯಾ ( 16) ನೀರಿಗೆ ಬಿದ್ದ ಯುವತಿ. ಈಕೆ ಸಮುದ್ರ ತೀರದ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬೃಹದಾಕಾರದ ಅಲೆ ಅಪ್ಪಳಿಸಿದ್ದು, ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿದ್ದಳು. ಕೂಡಲೇ ಯುವತಿಯನ್ನು ರಕ್ಷಿಸಲು ಕಾರ್ಯಾಚರಣೆಗಿಳಿದ ಲೈಫ್‌ಗಾರ್ಡ್ ಮತ್ತು ಆಪತ್ಬಾಂದವ ಈಶ್ವರ್ ಮಲ್ಪೆ ಅವರು ಯುವತಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಯುವತಿಯನ್ನು ಸಮುದ್ರದಿಂದ ರಕ್ಷಿಸಿ ದಡಕ್ಕೆ ತಂದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಉಪ್ಪು ನೀರು ಕುಡಿದಿದ್ದರಿಂದ ಆಕೆ ಅಸ್ವಸ್ಥಳಾಗಿದ್ದಳು.

    Share Information
    Advertisement
    Click to comment

    You must be logged in to post a comment Login

    Leave a Reply