Connect with us

    LATEST NEWS

    ಉಡುಪಿ – 2ನೇ ಮದುವೆಗಾಗಿ ಕೊರಗಜ್ಜನಲ್ಲಿ ಪ್ರಾರ್ಥಿಸಿದ ನಟಿ ಪ್ರೇಮಾ

    ಉಡುಪಿ ಜನವರಿ 19: ಕನ್ನಡದ ಖ್ಯಾತ ನಟಿ ಪ್ರೇಮಾ ಅವರು ಉಡುಪಿಯ ಕಾಪು ಕೊರಗಜ್ಜ ಸನ್ನಿಧಿಗೆ ಆಗಮಿಸಿದ ಪೂಜೆ ಸಲ್ಲಿಸಿದ್ದಾರೆ. ಕೊರಗಜ್ಜ ದೈವದ ಬಳಿ ಶೀಘ್ರ ಕಂಕಣ ಭಾಗ್ಯ ಕರುಣಿಸುವಂತೆ ಬೇಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಖಾಸಗಿ ಕಾರ್ಯಕ್ರಮಕ್ಕೆಂದು ಬಂದಿದ್ದ ಅವರು, ಇದೇ ಸಂದರ್ಭದಲ್ಲಿ ಕೊರಗಜ್ಜ ಸನ್ನಿಧಿಗೂ ಭೇಟಿ ನೀಡಿದ್ದಾರೆ.


    ಈಗಾಗಲೇ ಅವರು ವರ ನೋಡಿದ್ದು ಅದೇ ವರನನ್ನು ಮದುವೆ ಮಾಡಿಸುವಂತೆ ಕೊರಗಜ್ಜನಲ್ಲಿ ಪ್ರೇಮಾ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಉಡುಪಿ ಜಿಲ್ಲೆಯ ಕಾಪುವಿನ ಕೊರಗಜ್ಜ ದೈವ ಸನ್ನಿಧಾನಕ್ಕೆ ಭೇಟಿ ಕೊಟ್ಟ ನಂತರ ಅವರು ಕಾಪುವಿನ ಅಯ್ಯಪ್ಪ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ. ಪ್ರೇಮಾಗೆ ಸಹೋದರ ಅಯ್ಯಪ್ಪ ಹಾಗೂ ಅಯ್ಯಪ್ಪ ಪತ್ನಿ ಅನು ಕೂಡ ಜೊತೆಯಾಗಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply