LATEST NEWS
ಉಡುಪಿ – ಪೋಟೋಗ್ರಾಫರ್ ಗುರುದತ್ ಕಾಮತ್ ನಿಧನ
ಉಡುಪಿ, ಸೆಪ್ಟೆಂಬರ್ 28: ಉಡುಪಿಯ ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್(58) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಕಳೆದ ಒಂದು ವಾರದಿಂದ ಕಿಡ್ನಿ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ತಮ್ಮ ಕೈಚಳಕದ ಛಾಯಾಚಿತ್ರಗಳಿಗೆ ದೇಶ ವಿದೇಶಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಖ್ಯಾತ ಛಾಯಾಚಿತ್ರಗ್ರಾಹಕರಾಗಿದ್ದ ಇವರು, ಹೊಸತನದಿಂದ ಕೂಡಿದ ಛಾಯಾಗ್ರಾಹಣಕ್ಕೆ ಬಹಳಷ್ಟು ಹೆಸರು ವಾಸಿಯಾಗಿದ್ದರು.
You must be logged in to post a comment Login